Home ನಮ್ಮ ಜಿಲ್ಲೆ ಉತ್ತರ ಕನ್ನಡ ಮಳೆಗೆ ಮಾಯವಾದ ಬಾವಿ

ಮಳೆಗೆ ಮಾಯವಾದ ಬಾವಿ

0

ಶಿರಸಿ: ತಾಲೂಕಿನಲ್ಲಿ ಕಳೆದ 4-6 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಾನಾ ಅವಾಂತರಗಳು ಉಂಟಾಗುತ್ತಿದ್ದು, ಖಾಸಗಿ ಹಾಗೂ ಸರ್ಕಾರಿ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗುತ್ತಿದೆ.
ಸುಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಗುಂಡಿಕೊಪ್ಪ ಗ್ರಾಮದಲ್ಲಿ ವಿಪರೀತ ಮಳೆಗೆ ಸಾರ್ವಜನಿಕ ಬಾವಿ ಕುಸಿದು ಹೋಗಿದೆ.
ಬಾವಿಯ ಕಟ್ಟೆ ಸಹಿತ ಭೂಮಿಯೊಳಗೆ ಸೇರಿ ಹೋಗಿದ್ದು, ಬೃಹದಾಕಾರದ ಗುಂಡಿ ಮಾತ್ರ ಕಾಣುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮಕೈಗೊಂಡಿದ್ದಾರೆ.

Exit mobile version