Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಮನೆ ಮನೆ ಪ್ರತಿಭಟನೆಗೆ ಚಾಲನೆ

ಮನೆ ಮನೆ ಪ್ರತಿಭಟನೆಗೆ ಚಾಲನೆ

0

ಮಂಗಳೂರು: ಹಸಿರು ವಲಯ ನಿರ್ಮಿಸುವ ಸರಕಾರದ ಆದೇಶ ಧಿಕ್ಕರಿಸುತ್ತಿರುವ , ಸ್ಥಳೀಯರಿಗೆ ಉದ್ಯೋಗ ನಿರಾಕರಿಸುವ, ಮಾರಕ ಮಾಲಿನ್ಯದಿಂದ ಜೋಕಟ್ಟೆ, ಕಳವಾರು, ಕೆಂಜಾರು, ತೋಕೂರು ಗ್ರಾಮಗಳನ್ನು ರೋಗಗ್ರಸ್ತಗೊಳಿಸಿರುವ MRPL ಕಂಪೆನಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ “ನಾಗರಿಕ ಹೋರಾಟ ಸಮಿತಿ ಜೋಕಟ್ಟೆ” ಹಮ್ಮಿಕೊಂಡಿರುವ ‘ಮನೆ ಮನೆ ಪ್ರತಿಭಟನೆ’ಗೆ ಜೋಕಟ್ಟೆ ಗ್ರಾಮ ಪಂಚಾಯತ್ ಮುಂಭಾಗ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಚಾಲನೆ ನೀಡಿದರು.
ಇ ವೇಳೆ 62 ನೇ ತೋಕೂರು ಗ್ರಾಪಂ ಅಧ್ಯಕ್ಷ ಫಾರೂಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ ಎಸ್ ಬಶೀರ್, ಗ್ರಾಪಂ ಸದಸ್ಯ ಅಬೂಬಕ್ಕರ್ ಬಾವ, ಹೋರಾಟ ಸಮಿತಿಯ ಮುಖಂಡರುಗಳಾದ ಚಂದ್ರಶೇಖರ್, ಐತಪ್ಪ ಜೋಕಟ್ಟೆ, ಮನೋಜ್ ನಿರ್ಮುಂಜೆ, ಶೇಖರ್ ನಿರ್ಮುಂಜೆ, ಶ್ರೀನಿವಾಸ್ ಕೆಂಜಾರು, ಲಾನ್ಸಿ ಕಳವಾರು, ಇಕ್ಬಾಲ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Exit mobile version