ಹುಬ್ಬಳ್ಳಿ: ಬಿಜೆಪಿಯದ್ದು ಹೊಡಿ ಬಡಿ ಸರ್ಕಾರ. ಒಬ್ಬ ಮಂತ್ರಿಯಾಗಿ ಹೊಡಿ ಬಡಿ ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ ಅವರನ್ನು ಕೂಡಲೇ ಅರೆಸ್ಟ್ ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ ರನ್ನು ಕೂಡಲೇ ಅರೆಸ್ಟ್ ಮಾಡಬೇಕು. ಅವರಿಗೆ ನಾಚಿಕೆಯಾಗಬೇಕು, ಸಂವಿಧಾನದ ಮೇಲೆ ವೋಟ್ ತೆಗೆದುಕೊಳ್ಳುತ್ತಾರೆ. ಒಬ್ಬ ಮಂತ್ರಿಯಾಗಿ ಈ ರೀತಿ ಮಾತಾಡುವುದು ಅವರ ಬದ್ದತೆ ತೋರಿಸುತ್ತದೆ ಎಂದರು.
ಈ ಸರ್ಕಾರದ ಆಯಸ್ಸು ಕೇವಲ 60 ದಿನ. 60 ದಿನ ಆದ ಮೇಲೆ ಸರ್ಕಾರ ಹೋಗತ್ತದೆ.ಹೀಗಾಗಿ ಅವರು ಹುಚ್ಚ ಹುಚ್ಚಾಗಿ ಮಾತನಾಡುತ್ತಿದ್ದಾರೆ. ಸಿಟಿ ರವಿ, ಅಶ್ವಥ್ ನಾರಾಯಣ ಇವರದು ಎಲುಬಿಲ್ಲದ ನಾಲಿಗೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮೋದಿ ಅವರು ನೂರ ಸಲ ಬಂದರು ಕಾಂಗ್ರೆಸ್ ಅಧಿಕಾರಕ್ಕೆ ಬರತ್ತದೆ. ಇದು ಬಿಜೆಪಿ ಪಕ್ಷ ಅಲ್ಲ, ಭ್ರಷ್ಟಾಚಾರ ಜನತಾ ಪಾರ್ಟಿ, ಬ್ರೋಕರ್ ಜನತಾ ಪಾರ್ಟಿ ಎಂದು ಸಲೀಂ ಅಹ್ನದ್ ಆಕ್ರೋಶ ವ್ಯಕ್ತಪಡಿಸಿದರು.