ಕಲಬುರಗಿ: ವೈದ್ಯರ ನಿರ್ಲಕ್ಷತನವೇ ತಾಯಿ ಹಾಗೂ ಮಗು ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ, ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ಆಸ್ಪತ್ರೆ ಗಾಜು ಪುಡಿ ಪುಡಿ ಮಾಡಿ ಪೀಠೋಪಕರಣ ಧ್ವಂಸಗೊಳಿಸಿದ ಘಟನೆ ನಡೆದಿದೆ.
ನಗರದ ಇಕ್ಷಾಲ್ ಕಾಲೊನಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ನವಜಾತು ಶಿಶು ಮೃತಪಟ್ಟಿದ್ದು. ಐಸಿಯು ವ್ಯವಸ್ಥೆ ಇಲ್ಲದಕ್ಕೆ ಬಾಣಂತಿಯನ್ನು ಎಂಎಸ್‌ಕೆ ಮಿಲ್ ರಸ್ತೆಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬಾಣಂತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎನ್ನಲಾಗಿದ್ದು, ನವಜಾತ ಶಿಶುವಿನ ಶವ ನೋಡಲು ಬಂದಿದ್ದ ಕುಟುಂಬದ ಸದಸ್ಯರು ಆಕ್ರೋಶಗೊಂಡು ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಆಸ್ಪತ್ರೆಯ ಕಿಡಕಿ, ಪೀಠೋಪಕರಣಗಳಿಗೆ ಹಾನಿಯಾಗಿದೆ. ವೈದ್ಯರ ನಿರ್ಲಕ್ಷತನವೇ ತಾಯಿ ಹಾಗೂ ಮಗು ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ಆಸ್ಪತ್ರೆ ಗಾಜು ಪುಡಿ ಪುಡಿ ಮಾಡಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಆರ್.ಜಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ರವಿವಾರ ಸಂಜೆಯೇ ಕುಟುಂಬಸ್ಥರು, ಹೆರಿಗೆಗಾಗಿ ಸಬಾ ಪರ್ವೀನ್ ಅವರನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಹೆರಿಗೆಗೂ ಮುನ್ನ ಗರ್ಭದಲ್ಲಿಯೇ ಮಗು ಸಾವಿನ ಸಾಧ್ಯತೆ ಎಂದ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಇದರ ಮಧ್ಯೆಯೇ ಬಾಣಂತಿ ಕಡಿಮೆ ರಕ್ತದೊತ್ತಡದಿಂದಾಗಿ ಮೃತಪಟ್ಟಿದ್ದಾಳೆ. ತಾಯಿ ಮತ್ತು ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷತನವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.