Home ನಮ್ಮ ಜಿಲ್ಲೆ ಬಳ್ಳಾರಿ ಜೈಲಿಗೆ ವಕೀಲರ ಜತೆ ಬಂದ ವಿಜಯಲಕ್ಷ್ಮೀ

ಬಳ್ಳಾರಿ ಜೈಲಿಗೆ ವಕೀಲರ ಜತೆ ಬಂದ ವಿಜಯಲಕ್ಷ್ಮೀ

0

ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ‌ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮೀ ವಕೀಲರ ಜತೆ ಗುರುವಾರ ಬಳ್ಳಾರಿ ಜೈಲಿಗೆ ಆಗಮಿಸಿದರು.
ಈಗಾಗಲೇ ಎರಡು ಬಾರಿ ದರ್ಶನ್ ಭೇಟಿ ಮಾಡಿ‌ ಮಾತುಕತೆ ನಡೆಸಿದ್ದ ವಿಜಯಲಕ್ಷ್ಮೀ ಈ ಬಾರಿ ಮೈದುನ ದಿನಕರ್ ಹಾಗೂ ಇಬ್ಬರು ವಕೀಲರ ಜತೆ ಆಗಮಿಸಿದರು. ಕೊಲೆ ಪ್ರಕರಣ ಕುರಿತು ಈಗಾಗಲೇ ದರ್ಶನ್ ವಿರುದ್ಧ ಚಾಜ್೯ಶೀಟ್ ಕೋಟ್೯ಗೆ ಸಲ್ಲಿಕೆಯಾಗಿದ್ದು, ಸಮಗ್ರ ಅಧ್ಯಯನ ನಡೆಸಿದ ದರ್ಶನ್ ಪರ ವಕೀಲರು ಸೆಂಟ್ರಲ್ ಜೈಲಿನಲ್ಲಿ ಇರುವ ದರ್ಶನ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಅರ್ಧಗಂಟೆಗೂ ಹೆಚ್ಚು ಕಾಲ ಪತ್ನಿ, ಸಹೋದರ ಮತ್ತು ವಕೀಲರ ‌ಜತೆ ದರ್ಶನ್ ಮಾತುಕತೆ ನಡೆಸಿದರು.
ಇದೇ ವೇಳೆ ಒಂದು ಬ್ಯಾಗ್ ನಲ್ಲಿ‌ ದರ್ಶನ್ ಗಾಗಿ ಬಟ್ಟೆ, ಬೇಕರಿ ಐಟಂ ಹಾಗೂ ಡ್ರೈಫುಡ್ ಗಳನ್ನು ಪತ್ನಿ ವಿಜಯಲಕ್ಷ್ಮೀ ದರ್ಶನ್ ಗೆ ನೀಡಿದರು.

Exit mobile version