Home ತಾಜಾ ಸುದ್ದಿ ಫೆ.೮ ರಂದು ಒಂದು ಸರಳ ಪ್ರೇಮ ಕಥೆ ತೆರೆಗೆ

ಫೆ.೮ ರಂದು ಒಂದು ಸರಳ ಪ್ರೇಮ ಕಥೆ ತೆರೆಗೆ

0

ಹುಬ್ಬಳ್ಳಿ: ಒಂದು ಸರಳ ಪ್ರೇಮ ಕಥೆ ಫೆ.೮ ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ರೋಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ರಾಧಾಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಹಾಗೂ ಸ್ವಾತಿಷ್ಠ ಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ್ ಬಾಲಾರಾಜ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ ಎಂದರು.
ಒಂದು ಸರಳ ಪ್ರೇಮ ಕಥೆ ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ವಿಶೇಷ ಎಂದರೆ ವಿನಯ್ ಸಿನಿಮಾದಲ್ಲಿ ಅವರ ತಂದೆ ರಾಘವೇಂದ್ರ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಹೆಸರು ಹೇಳುವಂತೆ ಇದೊಂದು ಸರಳವಾದ ಪ್ರೇಮಕಥೆ. ಸಿನಿಮಾದ ನಾಯಕ ಸಂಗೀತ ನಿರ್ದೇಶಕನಾಗಿರುವ ಕಾರಣ ಸಂಗೀತಮಯ ಜರ್ನಿ ಇದಾಗಿರಲಿದೆ ಎಂದು ಹೇಳಿದರು.
ನಮ್ಮ ಆಲ್ಬಂ ಅನ್ನು ಕಾರಿನಲ್ಲಿ ಪ್ಲೇ ಮಾಡಿದರೆ ಮೈಸೂರಿನಿಂದ ಬೆಂಗಳೂರು ತಲುಪುತ್ತೀರ. ಸಿನಿಮಾದಲ್ಲಿ ಒಟ್ಟು ೧೧ ಹಾಡುಗಳಿವೆ. ಎಲ್ಲಾ ಪ್ರಕಾರದ ಸಂಗೀತ ಹೊಂದಿರುವ ಹಾಡುಗಳು ಇವೆ. ಖುಷಿಯ ವಿಷಯ ಏನೆಂದರೆ ಮೊದಲ ದಿನ ವಿನಯ್ ಸರ್ ಚಿತ್ರೀಕರಣ ಮಾಡಿದೆ. ಕೊನೆಯ ದಿನ ರಾಘಣ್ಣ ಅವರು ಚಿತ್ರೀಕರಣ ಮಾಡಿದ್ದೇನೆ. ದೊಡ್ಮನೆ ಕುಟುಂಬದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಒಟ್ಟು ೮೩ ದಿನ ಶೂಟ್ ನಡೆಸಿದ್ದೇವೆ. ಮುಂಬೈ, ರಾಜಸ್ಥಾನ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.
ನಟ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ನಟಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಶೂಟಿಂಗ್‌ಗೆ ಯಾವುದೇ ತೊಂದರೆ ಆಗದಂತೆ ನಿರ್ಮಾಪಕರಾದ ರಮೇಶ್ ವ್ಯವಸ್ಥೆ ಮಾಡಿದರು. ಸುನಿ ಅವರ ಜೊತೆ ಕೆಲಸ ಮಾಡಲು ಖುಷಿ ಎನಿಸಿತು. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಗೊಂಡಿವೆ. ಸಿನಿಮಾದ ಪ್ರಮೋಶನನ್ನು ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ಪ್ರಮೋಷನ್ ಮಾಡಲಾಗುವುದು ಎಂದು ಹೇಳಿದರು.
ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪ್ಪಾಜಿ, ನಿರ್ಮಾಪಕ ರಮೇಶ, ಮಂಜುನಾಥ ಇದ್ದರು.
ಇಂದು ಯೂಟ್ಯೂಬ್‌ನಲ್ಲಿ ಟ್ರೇಲರ್‌ ಬಿಡುಗಡೆಯಾಗಿದ್ದು ಟ್ರೇಲರ್‌ಗೆ ಸಿನಿರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ನೀವು ಒಮ್ಮೆ ಸರಳ ಪ್ರೇಮ ಕಥೆಯ ಟ್ರೇಲರ್‌ ನೋಡಿ….

Athishay Character Teaser | Ondu Sarala Prema Kathe | Vinay Rajkumar | Swathishta | Simple Suni

Exit mobile version