Home ಅಪರಾಧ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕೊಂದ ಪತಿ

ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕೊಂದ ಪತಿ

0
ಪತ್ನಿಯನ್ನು ಕೊಂದ ಪತಿ

ಕೂಡ್ಲಿಗಿ: ನಮ್ಮ ಮನೆಗೆ ತಕ್ಕವಳಲ್ಲ ಎಂದು ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಪತಿ ಹಾಗೂ ಪತಿ ಮನೆಯವರು ಸೇರಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದಾಖಲಾಗಿದೆ.
23 ವರ್ಷದ ಹೀನಾಬಾನು ಕೊಲೆಯಾದ ಮಹಿಳೆ. 2 ವರ್ಷಗಳ ಹಿಂದೆ ಬಣವಿಕಲ್ಲು ಗ್ರಾಮದ ಜಾಫರ್ ಸಾದಿಕ್ ಎಂಬುವವರ ಜೊತೆ ಪ್ರೀತಿಸಿ ಮದುವೆಯಾಗಿದ್ದರಂತೆ.
ಜಾಫರ್ ಸಾದಿಕ್ ಅವರ ಜೊತೆ ನನ್ನ ಮಗಳು ಪ್ರೀತಿ ಮಾಡಿದ್ದರಿಂದ ನಾವು ಅವನ ಜೊತೆ ಮದುವೆ ಮಾಡಿದ್ದೆವು. ನನ್ನ ಮಗಳಿಗೆ 7 ತಿಂಗಳ ಮಗು ಇದೆ. ನಮ್ಮ ಮನೆತನದ ಶ್ರೀಮಂತಿಕೆ ನೋಡಿ ನೀನು ಮದುವೆ ಆಗಿದ್ದೀಯಾ. ನಮ್ಮ ಮನೆತನಕ್ಕೆ ನೀನು ಸರಿಯಾದವಳಲ್ಲ ಎಂಬ ಕಾರಣಕ್ಕಾಗಿ ಸೋಮವಾರ ಮಧ್ಯಾಹ್ನ ಮಗಳು ಹೀನಾಬಾನುಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಹೀನಾ ತಾಯಿ ದೂರಿದ್ದಾರೆ. ಬಣವಿಕಲ್ಲು ಗ್ರಾಮದ ಜಾಫರ್ ಸಾದಿಕ್, ತಂದೆ ರಾಜಾಸಾಬ್, ತಾಯಿ ದಿಲ್ಲಾ, ಅಣ್ಣ ದಾದಾಪೀರ, ಅತ್ತಿಗೆ ಹೀನಾ ಬಾನು , ತಂಗಿ ಸಾಹಿರಾ ಬಾನು, ಅಜ್ಜಿ ಹುಸೇನಬಿ, ಇವರ ವಿರುದ್ಧ ಹೀನಾಬಾನು ತಾಯಿ ಆಸಿಫಾ ಬಾನು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Exit mobile version