Home ನಮ್ಮ ಜಿಲ್ಲೆ ಗದಗ ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪವಾಗಿದ್ದ ಸಾಹಿತಿ ಡಾ.ಕಾವೇಂಶ್ರೀ ಅಸ್ತಂಗತ

ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪವಾಗಿದ್ದ ಸಾಹಿತಿ ಡಾ.ಕಾವೇಂಶ್ರೀ ಅಸ್ತಂಗತ

0

ಗದಗ : ನಾಡಿನ ಹಿರಿಯ ಸಾಹಿತಿ,ಕಲಾರಾಧಕ,ಪ್ರಧಾನಿ ನರೇಂದ್ರ ಮೋದಿಯಿಂದ ಶ್ಲಾಘನೆಗೋಳಗಾಗಿದ್ದ ಡಾ.ಕಾವೇಂಶ್ರೀ ೫೮ ದಿ.೧೦ ರಂದು ಅಲ್ಪಕಾಲದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ದಿವಂಗತರು ಪತ್ನಿ,ಓರ್ವ ಪುತ್ರ,ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೂಲತ: ಚಿತ್ರಕಲಾವಿದನಾಗಿದ್ದ ಡಾ.ಕಾವೇಂಶ್ರೀ ಕಲೆ,ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿ ಕಳೆದ ಮೂರು ದಶಕಗಳಿಂದ ಕಲಾ ಚೇತನ ಅಕ್ಯಾಡೆಮಿ ಸ್ಥಾಪಿಸಿ ಸಹಸ್ರಾರು ಸಾಹಿತ್ಯ,ಸಂಗೀತ ಕಾರ್ಯಕ್ರಮಗಳನ್ನು ನೆರವೇರಿಸಿದ್ದರು.ಗದಗಕ್ಕೆ ಅನೇಕ ಅಂತರಾಷ್ಟ್ರೀಯ ಮಟ್ಟದ ಸಂಗೀತ ಕಲಾವಿದರುಗಳು,ಯಕ್ಷಗಾನ ಕಲಾವಿದರುಗಳನ್ನು ಕರೆಯಿಸಿ ಯಕ್ಷಗಾನ,ಸಂಗೀತ ಕಚೇರಿ ಎರ್ಪಡಿಸಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್‌ನಲ್ಲಿ ಡಾ.ಕಾವೇಂಶ್ರೀ ಅವರ ಸಾಧನೆಯನ್ನು ಪ್ರಸ್ತಾಪಿಸಿ ಬಣ್ಣಿಸಿದ್ದರು.ಕಾವೇಂಶ್ರೀ ನೂರಾರು ಪುಸ್ತಕಗಳು,ಸಹಸ್ರಾರು ಲೇಖನಗಳನ್ನು ರಚಿಸಿದ್ದು ವಿವಿಧ ದಿನಪತ್ರಿಕೆ,ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕಳೆದ ಮೂರು ದಶಕಗಳ ಹಿಂದೆ ಚಿತ್ರಕಲೆಯಲ್ಲಿ ಪದವಿ ಪಡೆಯಲು ಸಾಗರ ತಾಲೂಕಿನ ಕಾಳಮಂಜಿಯಿAದ ಗದಗಕ್ಕೆ ಆಗಮಿಸಿದ್ದ ಕಾಳಮುಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ (ಕಾವೇಂಶ್ರೀ) ತಮ್ಮ ಸಾಹಿತ್ಯಿಕ,ಸಂಗೀತ ಚಟುವಟಿಕೆಗಳಿಂದ ಅಪಾರ ಸ್ನೇಹಿತರನ್ನು ಸಂಪಾದಿಸಿದ್ದರು.ಚಿತ್ರಕಲೆಯೊಂದಿಗೆ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಲೇ ತಮ್ಮ ಜಾಣ್ಮೆಯಿಂದ ಸ್ವಂತ ಹೊಟೇಲ್ ಪ್ರಾರಂಭಿಸಿ ಹೊಟೇಲ್ ಉದ್ದಿಮೆಯಾಗಿದ್ದರು. ಕಾವೇಂಶ್ರೀ ಸಾಹಿತ್ಯದಲ್ಲಿ ಡಿಲಿಟ್ ಪಡೆದಿದ್ದರು.
ದಿ.ಡಾ.ಕಾವೇಂಶ್ರೀ ಗದಗ ಜಿಲ್ಲಾ ಹೊಟೇಲ್ ಒಡೆಯರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ದಿ.ಕಾವೇಂಶ್ರೀ ಪಾರ್ಥಿವ ಶರೀರವನ್ನು ಅಚಿತಿಮ ಸಂಸ್ಕಾರಕ್ಕೆ ಹುಟ್ಟೂರಾದ ಕಾಳ್ಮಂಜಿಗೆ ತೆಗೆದುಕೊಂಡು ಹೋಗುವ ಮುನ್ನ ಅವರ ಒಡೆತನದ ಹೊಟೇಲ್ ನೇಸರದ ಮುಂದೆ ಸುಮಾರು ಒಂದು ಗಂಟೆ ಸಾರ್ವಜನಿಕರ ಅಚಿತಿಮ ದರ್ಶನಕ್ಕೆ ಇಡಲಾಗಿತ್ತು.ಸಹಸ್ರಾರು ಸಾಹಿತ್ಯಾಸಕ್ತರು,ಕಲಾವಿದರು ಆಗಮಿಸಿ ಕಾವೇಂಶ್ರೀ ಪಾರ್ಥಿವ ಶರೀರಕ್ಕೆ ಹೂಮಾಲೆ ಅರ್ಪಿಸಿ ಶೃದ್ಧಾಂಜಲಿ ಸಲ್ಲಿಸಿದರು.
ಕಲಾಚೇತನ ಅಕ್ಯಾಡೆಮಿಯ ಸಂಚಾಲಕ ಡಾ.ಕಾವೇಂಶ್ರೀ ನಿಧನಕ್ಕೆ ಸಚಿವ ಡಾ.ಎಚ್.ಕೆ.ಪಾಟೀಲ,ಮಾಜಿ ಶಾಸಕ ಡಿ.ಆರ್.ಪಾಟೀಲ,ಶಾಸಕರುಗಳಾದ ಸಿ.ಸಿ.ಪಾಟೀಲ,ಡಾ.ಚಂದ್ರು ಲಮಾಣಿ,ಜಿ.ಎಸ್.ಪಾಟೀಲ,ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ದರಾಮ ಶ್ರೀಗಳು,ಪ್ರೊ.ಚಂದ್ರಶೇಖರ ವಸ್ತçದ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ,ಸಂಸ್ಕೃತಿ ಚಿಂತಕ ಡಾ.ಜಿ.ಬಿ.ಪಾಟೀಲ,ಶಿವಾನಂದಮಠದ ಕಿರಿಯ ಶ್ರೀ ಅಭಿನವ ಸದಾಶಿವಾನಂದ ಭಾರತಿ ಶ್ರೀಗಳು,ಡಾ.ಜಿ.ಬಿ.ಬೀಡನಾಳ ತೀವ್ರ ಸಂತಾಪ ಸೂಚಿಸಿದ್ದಾರೆ.

Exit mobile version