Home ನಮ್ಮ ಜಿಲ್ಲೆ ಕೊಪ್ಪಳ ಪ್ರಚೋದನಕಾರಿ ಘೋಷಣೆ: ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಪ್ರಕರಣ

ಪ್ರಚೋದನಕಾರಿ ಘೋಷಣೆ: ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಪ್ರಕರಣ

0

ಕೊಪ್ಪಳ: ಪ್ರಧಾನಿ ಮೋದಿ, ಅಮಿಷಾ ಮತ್ತು ಆರ್.ಎಸ್.ಎಸ್. ಹಿಂದೂ ಪರ ಸಂಘಟನೆಯ ವಿರುದ್ಧ ಪ್ರಚೋದನಾಕಾರಿ ಘೋಷಣೆ ಕೂಗಿರುವ ಎಸ್.ಡಿ.ಪಿ.ಐ ಕಾರ್ಯದರ್ಶಿಯ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ನಗರದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೇ ೩ರಂದು ನಡೆದ ಪ್ರತಿಭಟನೆಯ ವೇಳೆ ಪ್ರಚೋದಕಾರಿ ಘೋಷಣೆ ಕೂಗಿದ್ದಾಗಿ ಆರೋಪಿಸಿ ಎಸ್.ಡಿ.ಪಿ.ಐ. ಕಾರ್ಯದರ್ಶಿ ಹರ್ಷದ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನಾ ಮೆರವಣಿಗೆಯು ಗಡಿಯಾರ ಕಂಬದಿಂದ ಕುರುಗೋಡ ಪೋಟೊ ಸ್ಟುಡಿಯೋ ಬಳಿ ಬಂದಾಗ ಆರೋಪಿಯು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಆರ್.ಎಸ್.ಎಸ್. ಹಿಂದೂ ಪರ ಸಂಘಟನೆ ವಿರುದ್ಧ ಪ್ರಯೋಚನಕಾರಿ ಘೋಷಣೆ ಕೂಗಿದ್ದು, ಈ ಮೂಲಕ ಅಲ್ಲಿದ್ದ ವಿವಿಧ ಜನಾಂಗದ ಜನರಲ್ಲಿ ಧ್ವೇಷ ಮತ್ತು ವೈಮನಸ್ಸು ಭಾವನೆ ಉಂಟು ಮಾಡಿದ್ದಾರೆ ಎಂದು ನಗರಠಾಣೆಯ ಪಿಐ ಜಯಪ್ರಕಾಶ ದೂರು ನೀಡಿದ್ದಾರೆ.

Exit mobile version