Home ತಾಜಾ ಸುದ್ದಿ ಪಂಚಮಸಾಲಿ ಹೋರಾಟಕ್ಕೆ ಗ್ರೀನ್‌ಸಿಗ್ನಲ್: ಟ್ರ್ಯಾಕ್ಟರ್ ಬದಲು ಕ್ರೂಸರ್ ಬಳಕೆ

ಪಂಚಮಸಾಲಿ ಹೋರಾಟಕ್ಕೆ ಗ್ರೀನ್‌ಸಿಗ್ನಲ್: ಟ್ರ್ಯಾಕ್ಟರ್ ಬದಲು ಕ್ರೂಸರ್ ಬಳಕೆ

0

ಬೆಳಗಾವಿ: ಕೊನೆಗೂ ಲಿಂಗಾಯತ ಪಂಚಮಸಾಲಿ ಹೋರಾಟಕ್ಕೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನೀಡಿದೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಜೊತೆ ಬೆಳಗಾವಿ ಜಿಲ್ಲಾಡಳಿತ ಸೋಮವಾರ ಮಧ್ಯಾಹ್ನ ತುರ್ತು ಸಭೆ ನಡೆಸಿತು. ಸಂಧಾನ ಸಭೆ ಯಶಸ್ವಿಯಾದ ಬೆನ್ನಲ್ಲೇ ಬೆಳಗಾವಿ ಡಿಸಿ ಮಹಮ್ಮದ್ ರೋಷನ್ ಪಂಚಮಸಾಲಿ ಹೋರಾಟಕ್ಕೆ ಅನುಮತಿ ನೀಡಿದರು. ಪ್ರತಿಭಟನೆಯಲ್ಲಿ ಟ್ರ‍್ಯಾಕ್ಟರ್ ಬಳಕೆ ಮಾಡದಿರಲು ಸ್ವಾಮೀಜಿ ಒಪ್ಪಿಗೆ ಸೂಚಿಸಿದ್ದಾರೆ. ಪಂಚಮಸಾಲಿ ಸ್ವಾಮೀಜಿ ಅವರ ಜೊತೆ ಒಳ್ಳೆಯ ಚರ್ಚೆ ನಡೆದಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟನೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಎಷ್ಟು ಜನ ಸೇರುತ್ತಾರೆ ಎನ್ನುವ ಮಾಹಿತಿ ಸ್ವಾಮೀಜಿ ನೀಡಿದ್ದಾರೆ. ಟ್ರ್ಯಾಕ್ಟರ್ ಬರುವುದರಿಂದ ಸಮಸ್ಯೆ ಆಗುತ್ತದೆ ಎಂದು ಮನವರಿಕೆ ಮಾಡಲಾಗಿದೆ. ಪೆಂಡಾಲ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದಾರೆ. ಟ್ರ‍್ಯಾಕ್ಟರ್ ಬದಲು ಕ್ರೂಸರ್ ವಾಹನ ಬಳಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.

Exit mobile version