Home ನಮ್ಮ ಜಿಲ್ಲೆ ಗದಗ ನಾವೆಲ್ಲ ಭಾರತ ಮಾತೆಯ ಮಕ್ಕಳು, ಕಾಂಗ್ರೆಸ್‌ನವರು ಸೋನಿಯಾ ಗಾಂಧಿ ಮಕ್ಕಳು

ನಾವೆಲ್ಲ ಭಾರತ ಮಾತೆಯ ಮಕ್ಕಳು, ಕಾಂಗ್ರೆಸ್‌ನವರು ಸೋನಿಯಾ ಗಾಂಧಿ ಮಕ್ಕಳು

0

ಗದಗ: ನಾವೆಲ್ಲ ಭಾರತ ಮಾತೆಯ ಮಕ್ಕಳು. ಕಾಂಗ್ರೆಸ್‌ನವರು ಸೋನಿಯಾ ಗಾಂಧಿ ಮಕ್ಕಳು. ನಾವು ಭಾರತ ಮಾತೆಯ ಸೇವೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಿಗ್ಲಿ,ದೊಡ್ಡೂರು, ಕುರುಡಗಿ, ಸೂರಣಗಿ, ಬಾಲೆಹೊಸೂರು ಗ್ರಾಮಗಳಲ್ಲಿ ರೋಡ್ ಶೋ ಮಾಡಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ಹತ್ತು ವರ್ಷದಲ್ಲಿ ಭಯೋತ್ಪಾದಕರನ್ನು ಅವರ ನೆಲದಲ್ಲಿ ಹೋಗಿ ಧ್ವಂಸ ಮಾಡಿದ್ದಾರೆ. ಭಾರತವನ್ನು ಭಯೋತ್ಪಾದನೆ ಮುಕ್ತ ಮಾಡಿದ್ದಾರೆ. ಪಾಕಿಸ್ತಾನದ ಜನರು ನರೇಂದ್ರ ಮೋದಿಯವರು ಆ ದೇಶದ ಪ್ರಧಾನಿಯಾಗಿ ಅವರ ದೇಶ ಅಭಿವೃದ್ಧಿ ಮಾಡಿಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಒಬ್ಬ ಚಾಯ್ ಮಾರುವ ಹುಡುಗ ಹಂತ ಹಂತವಾಗಿ ಮೇಲೆ ಬಂದವರು ನರೇಂದ್ರ ಮೋದಿಯವರು. ಅವರ ಕರ್ತವ್ಯ ಪ್ರಜ್ಞೆ ಎಷ್ಟಿದೆ ಎಂದರೆ ಅವರ ತಾಯಿ ನಿಧನ ಹೊಂದಿದಾಗ ಮೂರು ಗಂಟೆಯಲ್ಲಿ ಅಂತ್ಯ ಸಂಸ್ಕಾರ ಮಾಡಿ, ಮತ್ತೆ ದೇಶದ ಕೆಲಸ ಆರಂಭಿಸಿದರು ಎಂದರು.

Exit mobile version