Home ತಾಜಾ ಸುದ್ದಿ ಧರ್ಮಸ್ಥಳದಲ್ಲಿ ಶಾಸಕ ಶಿವಲಿಂಗೇಗೌಡ ಆಣೆ–ಪ್ರಮಾಣ

ಧರ್ಮಸ್ಥಳದಲ್ಲಿ ಶಾಸಕ ಶಿವಲಿಂಗೇಗೌಡ ಆಣೆ–ಪ್ರಮಾಣ

0

ಹಾಸನ ಜಿಲ್ಲೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಇಂದು ಧರ್ಮಸ್ಥಳದಲ್ಲಿ ಆಣೆ–ಪ್ರಮಾಣ ಮಾಡಿದರು.
ಬಿಜೆಪಿಯ ಕೆಲ ನಾಯಕರು ಅವರ ವಿರುದ್ಧ ರಾಗಿ ಕದ್ದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಇಂದು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಗಿ ಕಳ್ಳ ಅಂದಿದ್ದರು, ನಾನು ಏನೂ ಕದ್ದಿಲ್ಲ ಅಂತ ಆಣೆ–ಪ್ರಮಾಣ ಮಾಡಿದ್ದೇನೆ. ಬಿಜೆಪಿ ಮುಖಂಡರು ನನ್ನ ವಿರುದ್ಧ ಆರೋಪ ಮಾಡಿದ್ದರು. ಅವರನ್ನೂ ಧರ್ಮಸ್ಥಳಕ್ಕೆ ಆಹ್ವಾನಿಸಿದ್ದೆ. ಈಗ ಅವರು ಏನು ದಾಖಲೆ ಇದೆ ಅದನ್ನು ಬಿಡುಗಡೆಗೊಳಿಸಲಿ. ನಿರಪರಾಧಿಗಳನ್ನು ಸಾರ್ವಜನಿಕರವಾಗಿ ನಿಂದನೆ ಮಾಡುವುದು ಸರಿಯಲ್ಲ’ ಎಂದರು.

Exit mobile version