Home ನಮ್ಮ ಜಿಲ್ಲೆ ಮುರುಘಾ ಶ್ರೀಗಳನ್ನು ಚಿತ್ರದುರ್ಗಕ್ಕೆ ಕಳುಹಿಸಿದ ಪೊಲೀಸರು

ಮುರುಘಾ ಶ್ರೀಗಳನ್ನು ಚಿತ್ರದುರ್ಗಕ್ಕೆ ಕಳುಹಿಸಿದ ಪೊಲೀಸರು

0

ಹಾವೇರಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಕಾರನ್ನು ಶಿಗ್ಗಾವಿ ತಾಲೂಕಿನ ಬಂಕಾಪುರ ಟೋಲ್‌ಗೇಟ್ ಬಳಿ ತಡೆದ ಪೊಲೀಸರು ಶ್ರೀಗಳನ್ನು ಚಿತ್ರದುರ್ಗಕ್ಕೆ ಕಳುಹಿಸಿದ ಘಟನೆ ಸೋಮವಾರ ನಡೆದಿದೆ.
ಭಾನುವಾರ ರಾತ್ರಿಯಿಂದ ಶರಣರು ಚಿತ್ರದುರ್ಗದ ಮಠದಲ್ಲಿ ಇಲ್ಲ ಎಂಬ ಮಾಹಿತಿ ಹರಡುತ್ತಿದ್ದಂತೆ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಬೆಳಗ್ಗೆ 11 ಗಂಟೆ ಹೊತ್ತಿಗೆ ಧಾರವಾಡದಿಂದ ಬರುತ್ತಿದ್ದ ಮುರುಘಾ ಶರಣರನ್ನು ಬಂಕಾಪುರ ಟೋಲ್‌ಗೇಟ್ ಬಳಿ ಹಾವೇರಿ ಹಾಗೂ ಚಿತ್ರದುರ್ಗ ಪೊಲೀಸರು ತಡೆದರು. ಅಲ್ಲಿಂದ ಚಿತ್ರದುರ್ಗದ ಪೊಲೀಸರು ಶರಣರನ್ನು ಕರೆದೊಯ್ದಿದ್ದಾರೆ. ಮುರುಘಾ ಶ್ರೀಗಳು ಪ್ರಕರಣದ ಸಂಬಂಧ ವಕೀಲರನ್ನು ಭೇಟಿಯಾಗಲು ಧಾರವಾಡಕ್ಕೆ ತೆರಳಿ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ. ಇಲ್ಲಿಂದ ನೇರವಾಗಿ ಅವರು ಚಿತ್ರದುರ್ಗದ ಮುರುಘಾಮಠಕ್ಕೆ ತೆರಳಿದ್ದಾರೆ.

Exit mobile version