Home ನಮ್ಮ ಜಿಲ್ಲೆ ಕೊಪ್ಪಳ ದೊಡ್ಡನಗೌಡ ಬಿಜೆಪಿ ಅಭ್ಯರ್ಥಿ: ಬೊಮ್ಮಾಯಿ

ದೊಡ್ಡನಗೌಡ ಬಿಜೆಪಿ ಅಭ್ಯರ್ಥಿ: ಬೊಮ್ಮಾಯಿ

0
ದೊಡ್ಡನಗೌಡ

ಕುಷ್ಟಗಿ: ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು ಅವರನ್ನು ಗೆಲ್ಲಿಸಲು ಕ್ಷೇತ್ರದ ಕಾರ್ಯಕರ್ತರು ಮುಂದಾಗಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ತಾವರಗೇರಾ ರಸ್ತೆಯಲ್ಲಿ ಬರುವ ಹಾಲಿನ ಡೈರಿ ಹತ್ತಿರ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸ್ಪರ್ಧೆ ಮಾಡಲಿರುವ ದೊಡ್ಡನಗೌಡ ಅವರಿಗೆ ಕ್ಷೇತ್ರದ ಜನತೆ ಆಶೀರ್ವಾದ ಮಾಡಬೇಕು ಅಂದಾಗ ಮಾತ್ರ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಕುಷ್ಟಗಿ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿಯಾದ ದೊಡ್ಡನಗೌಡ ಪಾಟೀಲ ಅವರು ಒಬ್ಬ ಪ್ರಾಮಾಣಿಕ ಯುವಕ ಕುಷ್ಟಗಿ ಕ್ಷೇತ್ರದ ಜನರು ಆತನಿಗೆ ಆಶೀರ್ವಾದ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಹಾಕುವ ಮೂಲಕ ಶಾಸಕರನ್ನಾಗಿ ಮಾಡಬೇಕು ಎಂದರು.

Exit mobile version