Home ನಮ್ಮ ಜಿಲ್ಲೆ ದೇಶದ ಐದಾರು ರಾಜ್ಯಗಳಲ್ಲಿ ಭೀಕರ ಬರ

ದೇಶದ ಐದಾರು ರಾಜ್ಯಗಳಲ್ಲಿ ಭೀಕರ ಬರ

0
M B Patil

ವಿಜಯಪುರ: ದೇಶದಲ್ಲಿ ಈಗ ಐದಾರು ರಾಜ್ಯಗಳು ಭೀಕರ ಬರದಿಂದ ತತ್ತರಿಸಿವೆ. ನಮ್ಮ ರಾಜ್ಯದಲ್ಲಿಯೂ ಬರಗಾಲ ಉಂಟಾಗಿದ್ದು, ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆಯುತ್ತಿರುವ ದ್ಯಾಮವ್ವದೇವಿ ದೇವಸ್ಥಾನದ ಉದ್ಘಾಟನೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಬರವನ್ನು ಸಮರ್ಥವಾಗಿ ಎದುರಿಸುತ್ತಿದ್ದು, ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ದ್ಯಾಮವ್ವದೇವಿ ಎಲ್ಲರಿಗೂ ಆಯುಷ್ಯ, ಆರೋಗ್ಯ ನೀಡಲಿ. ನಾಡಿನಲ್ಲಿ ಉತ್ತಮ ಮಳೆ ಬಂದು, ಬೆಳೆ ಸಮೃದ್ಧವಾಗಿರುವಂತೆ ಆಶೀರ್ವಾದ ಮಾಡಿ ನಮ್ಮೆಲ್ಲರನ್ನು ಕರುಣಿಸಲಿ ಎಂದರು.

Exit mobile version