ತೋಟಕ್ಕೆ ಲಗ್ಗೆ ಇಟ್ಟ ಆನೆ ಹಿಂಡು: ತೆಂಗಿನ ಮತ್ತು ಅಡಿಕೆ ಮರಗಳು ನಾಶ
ಶಿರಸಿ: ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಇಂದು ನಿನ್ನೆಯದಲ್ಲ. ಇದು ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದೆ. ಈ ನಡುವೆ ತಾಲೂಕಿನಲ್ಲಿ ಆನೆ ದಾಳಿ ಮತ್ತೆ ಆರಂಭವಾಗಿದ್ದು
ಬೆಂಗಳೆ ಗ್ರಾಮದ ಭಾಗದಲ್ಲಿ ರೈತರು ಆನೆ ಹಾವಳಿಯಿಂದ ಹೈರಾಣಾಗಿದ್ದಾರೆ. ತಾಲೂಕಿನಲ್ಲಿ ಆನೆ ದಾಳಿಯಿಂದ ರೈತರ ನಿದ್ದೆ ಗೆಡಿಸುವಂತೆ ಮಾಡಿದೆ. ಗ್ರಾಮದ ವೆಂಕಟೇಶ ಹೆಗಡೆ ಈ ಕುರತಂತೆ ಮಾಹಿತಿ ನೀಡಿ ಬೆಂಗಳೆ ಗ್ರಾಮದ ಒಣಿಕೇರಿಯಲ್ಲಿರುವ ಗಣಪತಿ ಗುರುನಾಥ ಹೆಗಡೆ ಇವರಿಗೆ ಸೇರಿದ ತೆಂಗಿನ ಮತ್ತು ಅಡಿಕೆ ತೋಟಕ್ಕೆ ಲಗ್ಗೆಯಿಟ್ಟಿರುವ ಆನೆಗಳ ಹಿಂಡು 40 ಕ್ಕೂ ಹೆಚ್ಚಿನ ತೆಂಗಿನ ಮರಕ್ಕೆ ಹಾನಿಮಾಡಿದೆ ಎಂದರು.