Home ಅಪರಾಧ ತನ್ನ ಮಗುವನ್ನೇ ಕೊಂದ ಪೊಲೀಸ್

ತನ್ನ ಮಗುವನ್ನೇ ಕೊಂದ ಪೊಲೀಸ್

0

ಚಿಕ್ಕೋಡಿ: ಜನರ ಪ್ರಾಣ ರಕ್ಷಣೆ ಮಾಡಬೇಕಾದ ಪೊಲೀಸ್ ಪೇದೆಯೋರ್ವ ತನ್ನ ನಾಲ್ಕು ತಿಂಗಳ ಕರುಳ ಕುಡಿಯನ್ನು ಡಾಂಬರ್ ರಸ್ತೆ ಮೇಲೆ ಎಸೆದು ಸಾಯಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಗೊಕಾಕ ತಾಲೂಕಿನ ದುರದುಂಡಿ ಗ್ರಾಮದ ಬಸಪ್ಪ ಬಳುನಕಿ ಎಂಬಾತ ತನ್ನ ನಾಲ್ಕು ತಿಂಗಳ ಮಗುವಿನ ಹತ್ಯೆ ಮಾಡಿದ್ದಾನೆ. ಕೆಎಸ್‌ಆರ್‌ಪಿ ಪೇದೆ ಬಸಪ್ಪ ಬಳುಣಕಿ ತನ್ನ ಪತ್ನಿ ಲಕ್ಷ್ಮೀ ತವರು ಮನೆ ಚಿಂಚಲಿ ಪಟ್ಟಣಕ್ಕೆ ಆಗಮಿಸಿದ್ದಾನೆ. ತನ್ನ ಊರಲ್ಲಿ ಜಾತ್ರೆ ಇರುವುದರಿಂದ ಹೆಂಡತಿಯನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ಆದರೆ ಮಗು ಚಿಕ್ಕದು ಇರುವುದರಿಂದ ಕಳುಹಿಸಲು ಆತನ ಅತ್ತೆ ಮನೆಯವರು ಹಿಂದೇಟು ಹಾಕಿದ್ದಾರೆ. ಇದರಿಂದ ಕೋಪಗೊಂಡ ಆತ ಮಗುವನ್ನು ಎತ್ತಿ ಮೇಲಿಂದ ಬಿಸಾಕಿದ್ದಾನೆ. ಇದರಿಂದಾಗಿ ಹಸುಳೆ ಕಂದಮ್ಮ ಸಾವನ್ನಪ್ಪಿದೆ. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಪತ್ನಿ ಲಕ್ಷ್ಮೀ ತನ್ನ ಪತಿ ನಿತ್ಯ ವರದಕ್ಷಿಣೆಗಾಗಿ ನಿತ್ಯ ಕಿರಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ.

Exit mobile version