Home ಅಪರಾಧ ಡಿಸಿಸಿ ಬ್ಯಾಂಕ್ ನಕಲಿ ಗೋಲ್ಡ್ ಹಗರಣ: ಶಿವಮೊಗ್ಗದಲ್ಲಿ ಮುಂದುವರಿದ ಇಡಿ ದಾಳಿ

ಡಿಸಿಸಿ ಬ್ಯಾಂಕ್ ನಕಲಿ ಗೋಲ್ಡ್ ಹಗರಣ: ಶಿವಮೊಗ್ಗದಲ್ಲಿ ಮುಂದುವರಿದ ಇಡಿ ದಾಳಿ

0

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಯಲ್ಲಿ ೨೦೧೪ರ ಜೂನ್‌ನಲ್ಲಿ ನಡೆದಿದ್ದ ನಕಲಿ ಬಂಗಾರ ಹಗರಣಕ್ಕೆ ಸಂಬಂಧಿಸಿದಂತೆ, ಡನೇ ದಿನವಾದ ಬುಧವಾರವು ಜಿಲ್ಲೆಯ ವಿವಿಧೆಡೆ ಇಡಿ ದಾಳಿ ಮುಂದುವರಿದಿದೆ.
ಬುಧವಾರ ಶಿವಮೊಗ್ಗ ನಗರದ ಅಚ್ಯುತ್‌ರಾವ್ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್. ಸುಧೀರ್ ಅವರ ಮನೆ ಮೇಲೆ ಇಡಿ ಅಧಿಕಾರಿ ಗಳು ದಾಳಿ ನಡೆಸಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರ ಆಪ್ತ ಕೃಷ್ಣಮೂರ್ತಿ ಭಟ್ ಮನೆ ಮೇಲೆ ಇಡಿ ಅಧಿ ಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳವಾರ ಡಿಸಿಸಿ ಬ್ಯಾಂಕ್ ಅಂದಿನ ಮ್ಯಾನೇಜರ್ ಶೋಭಾ ಅವರ ನಿವಾಸ, ಕುಂಸಿಯಲ್ಲಿರುವ ಶೋಭಾ ನಿವಾಸ, ಚಾಲಕರಾಗಿದ್ದ ಕಾಮಾಕ್ಷಿ ಬೀದಿಯ ಶಿವಕುಮಾರ್ ಮನೆ, ಬ್ಯಾಂಕ್‌ನ ಕ್ಯಾಷಿಯರ್ ಆಗಿದ್ದ ರವೀಂದ್ರ ಅವರ ಕೂಡ್ಲಿ ಯಲ್ಲಿರುವ ನಿವಾಸ, ಹಾಲಿ ಡಿಸಿಸಿ ಬ್ಯಾಂಕ್ ಮುಖ್ಯ ಶಾಖೆಯ ಮ್ಯಾನೇಜರ್ ಆಗಿರುವ ನಾಗಭೂಷಣ್ ಅವರ ನಿವಾಸ, ಡಿಸಿಸಿ ಬ್ಯಾಂಕ್ ಬಿಹೆಚ್ ರಸ್ತೆ ಶಾಖೆ, ಭದ್ರಾವತಿಯ ಜೆಡಿಕಟ್ಟೆಯಲ್ಲಿರುವ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಶಶಿಕುಮಾರ್ ಮನೆ ಮೇಲೆ ಸೇರಿದಂತೆ 8 ಕಡೆ ಅಧಿಕಾರಿಗಳ ತಂಡ ದಾಳಿ ನಡೆಸಿ, ತಡರಾತ್ರಿ ಯವರೆಗೆ ದಾಖಲೆಗಳನ್ನು ಪರಿಶೀಲಿಸಿತ್ತು.

Exit mobile version