Home ನಮ್ಮ ಜಿಲ್ಲೆ ಕೊಪ್ಪಳ ಗೊಂಬೆ ತಯಾರಿಕಾ ಕಾರ್ಖಾನೆಗಳಿಗೆ ಒತ್ತು

ಗೊಂಬೆ ತಯಾರಿಕಾ ಕಾರ್ಖಾನೆಗಳಿಗೆ ಒತ್ತು

0

ಇಂಗಾಲಾಮ್ಲ ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿ

ಕೊಪ್ಪಳ: ಪರಿಸರದ ಮೇಲಾಗುವ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಇಂಗಾಲಾಮ್ಲ ಕಡಿಮೆ ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿ ಹಸಿರು ಇಂಧನ ಬಳಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಾರತೀಯ ಉಕ್ಕು ಪ್ರಾಧಿಕಾರ ಬಿಲಾಯಿ, ರೂರ್ಕೆಲ, ಬಕೊರೊ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 5 ದೊಡ್ಡ ಉಕ್ಕು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಪರಿಸರದ ಮೇಲೆ ಆಗುವ ಹಾನಿ ತಡೆಯಲು ಅರಣ್ಯೀಕರಣ, ಟೌನ್ ಶಿಪ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.

ಗೊಂಬೆ ತಯಾರಿಕಾ ಕಾರ್ಖಾನೆಗಳಿಗೂ ಒತ್ತು : ಜಗತ್ತಿನಾದ್ಯಂತ ಗೊಂಬೆ ತಯಾರಿಕೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇದರ ಲಾಭವನ್ನು ಹೆಚ್ಚಾಗಿ ಚೈನಾ ಪಡೆಯುತ್ತಿದ್ದು, ಅದಕ್ಕೆ ಪೈಪೋಟಿ ನೀಡುವ ಉದ್ದೇಶದಿಂದ ಕೊಪ್ಪಳ ಸೇರಿದಂತೆ ಹಲವು ಭಾಗಗಳಲ್ಲಿ ಗೊಂಬೆ ತಯಾರಿಕಾ ಕಾರ್ಖಾನೆಗಳಿಗೂ ಒತ್ತು ನೀಡಲಾಗಿತ್ತು. ಆದರೆ ಅದಕ್ಕೆ ರಾಜ್ಯ ಸರ್ಕಾರದಿಂದ ಬೆಂಬಲ ದೊರೆಯುತ್ತಿಲ್ಲ ಎಂದರು.

Exit mobile version