Home ಸಿನಿ ಮಿಲ್ಸ್ ಡೆವಿಲ್ ಮತ್ತೊಂದು ಗೀತ ದರ್ಶನ

ಡೆವಿಲ್ ಮತ್ತೊಂದು ಗೀತ ದರ್ಶನ

0

ನಟ ದರ್ಶನ್ ಅವರ ‘ಡೆವಿಲ್’ ಚಿತ್ರದ 2ನೇ ಗೀತೆ “ಒಂದೆ ಒಂದೆ ಸಲ” ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಅಭಿಮಾನಿಗಳಲ್ಲಿ ಡವ ಡವ ಉತ್ಸಾಹವನ್ನು ಹೆಚ್ಚಿಸಿದೆ.

ಈ ಚಿತ್ರದಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ದರ್ಶನ್ ಜೊತೆಗಿನ ಮೊದಲ ಸಂಯೋಗದಲ್ಲಿ ಕನ್ನಡ ಮಾತ್ರವಲ್ಲ, ತಮಿಳು ಮತ್ತು ತೆಲುಗು ಪ್ರೇಕ್ಷಕರಿಗೂ ಆಕರ್ಷಕ ಸಂಗೀತದ ಚಾಪು ಮೂಡಿಸಿದ್ದಾರೆ. ಹಿಂದಿನ ಹಿಟ್ ಗೀತೆಗಳಂತೆ, ಈ 2ನೇ ಗೀತೆ ಕೂಡ ತಕ್ಷಣವೇ ಟ್ರೆಂಡಿಂಗ್ ಸೃಷ್ಟಿಸಿದೆ.

ನಟ ದರ್ಶನ್ ತಮ್ಮ ವೈಶಿಷ್ಟ್ಯಪೂರ್ಣ ನಟನೆಯ ಮೂಲಕ ಅಭಿಮಾನಿಗಳನ್ನು ಮನಸೆಳೆದಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ಶರ್ಮಿಳಾ ಮಾಂಡ್ರೆ, ಚಂದು ಗೌಡ, ವಿನಯ್ ಗೌಡ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ತಾರಕ್’ ನಂತರ ನಿರ್ದೇಶಕ ಮಿಲನ ಪ್ರಕಾಶ್ ಪುನಃ ದರ್ಶನ್‌ಗೆ ನಿರ್ದೇಶಕರಾಗಿ ಜೊತೆಯಾಗಿದ್ದಾರೆ. ಪ್ರಸಿದ್ಧ ಛಾಯಾಗ್ರಾಹಕ ಸುಧಾಕರ್ ಎಸ್. ರಾಜ್ ಸಿನಿಮಾದ ದೃಶ್ಯಕಲೆಗೆ ಪ್ರಭಾವಶಾಲಿ ಶೈಲಿಯನ್ನು ನೀಡಿದ್ದಾರೆ. ಕಥೆ ಮತ್ತು ಚಿತ್ರಕಥೆ ಪ್ರಕಾಶ್ ವೀರ ರಚಿಸಿದ್ದಾರೆ. ಚಿತ್ರವನ್ನು ಶ್ರೀ ಜೈಮಾತಾ ಕಂಬೈನ್ಸ್ ಭರ್ಜರಿಯಾಗಿ ನಿರ್ಮಿಸಿದ್ದು, ಆಡಿಯೋ ಹಕ್ಕುಗಳನ್ನು ಸರಿಗಮ ಮ್ಯೂಸಿಕ್ ಪಡೆದಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರಚಾರದ ಜವಾಬ್ದಾರಿಯನ್ನು ಹೊತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುವಂತೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪ್ರೇಕ್ಷಕರು ಈಗಾಗಲೇ ಯೂಟ್ಯೂಬ್ ಲಿಂಕ್ ಮೂಲಕ ಹಾಡನ್ನು ಆಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version