Home ತಾಜಾ ಸುದ್ದಿ ಬಸವಣ್ಣನವರ ವಚನ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಪೊಲೀಸ್ ಅಧಿಕಾರಿ

ಬಸವಣ್ಣನವರ ವಚನ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಪೊಲೀಸ್ ಅಧಿಕಾರಿ

0

ಪೊಲೀಸ್ ಅಧಿಕಾರಿಯ ಕೃತಿ ‘My Me is Thee’ಗೆ ಸಚಿವರ ಅಭಿನಂದನೆ

ಬೆಂಗಳೂರು: ಬಸವಣ್ಣ ಅವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ‘My Me is Thee’ ಕೃತಿಯನ್ನು ಪೊಲೀಸ್ ಅಧಿಕಾರಿ ಬಸವರಾಜ ಯಲಿಗಾರ್ ಸಚಿವ ಎಂ. ಬಿ. ಪಾಟೀಲರಿಗೆ ನೀಡಿದ್ದಾರೆ.
ಈ ಕುರಿತಂತೆ ಸಚಿವ ಎಂ.ಬಿ. ಪಾಟೀಲ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ವಿಜಯಪುರ ನಗರದ DYSPಯಾಗಿ ಕರ್ತವ್ಯ ನಿರ್ಹಿಸುತ್ತಿರುವ ಪೊಲೀಸ್ ಅಧಿಕಾರಿ ಬಸವರಾಜ ಯಲಿಗಾರ್ ಅವರು ಕಾಯಕಯೋಗಿ ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿರುವುದು ಅರ್ಥಪೂರ್ಣ ಸಂಗತಿ.

ಪರಮ ಪೂಜ್ಯ ಡಾ. ರುದ್ರಮುನಿ ಶಿವಾಚಾರ್ಯರು, ಪುರವರ ಹಿರೇಮಠ ಆಲಮಟ್ಟಿ ಶ್ರೀಗಳ ಸಮ್ಮುಖದಲ್ಲಿ ಶ್ರೀ ಯಲಿಗಾರ ಅವರ ‘My Me is Thee’ ಕೃತಿ ಕೈಯಲ್ಲಿ ಹಿಡಿದಾಗ ಮನಸು ಸಂತೋಷದಿಂದ ತುಂಬಿತು.

ಬಸವಣ್ಣನವರ ತತ್ವಗಳು ಯುಗಯುಗಾಂತರಕ್ಕೂ ‘ಮಹಾಬೆಳಕು’ ಎಂಬುದು ನಿರ್ವಿವಾದ. ಇಂತಹ ಅನುವಾದಗಳು ವಚನಗಳನ್ನು ವಿಶ್ವದಾದ್ಯಂತ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕೃತಿ ಕೇವಲ ಅನುವಾದವಲ್ಲ, ಅದು ಬಸವಣ್ಣನವರ ದಿವ್ಯ ದರ್ಶನದ ಪ್ರತಿಬಿಂಬ. ಬಸವರಾಜ ಯಲಿಗಾರ್ ಅವರ ಈ ಸಾಧನೆಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Exit mobile version