Home ನಮ್ಮ ಜಿಲ್ಲೆ ಗುಂಬಜ್ ಮೇಲೆ ಕಳಸ ಹೇಗೆ ಬಂತು..? – ಪ್ರತಾಪ್ ಸಿಂಹ ಪ್ರಶ್ನೆ

ಗುಂಬಜ್ ಮೇಲೆ ಕಳಸ ಹೇಗೆ ಬಂತು..? – ಪ್ರತಾಪ್ ಸಿಂಹ ಪ್ರಶ್ನೆ

0

ಮೈಸೂರಿನ ಹಲವೆಡೆಗಳಲ್ಲಿ ಮಸೀದಿ ಮಾದರಿಯ ಬಸ್ ನಿಲ್ದಾಣಗಳು ನಿರ್ಮಾಣಗೊಂಡಿದ್ದು, ತೀವ್ರ ವಿರೋಧಕ್ಕೆ ಕಾರಣವಾಗಿದೆ. ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಹಲವೆಡೆಗಳಲ್ಲಿ ಮಸೀದಿ ಮಾದರಿಯ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟಿಪ್ಪು ಪ್ರತಿಮೆ ನಿರ್ಮಾಣ ವಿಚಾರಗಳ ಬೆನ್ನಲ್ಲೇ ಈಗ ಇಂಥದ್ದೊಂದು ಬೆಳವಣಿಗೆಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಈ ಮಸೀದಿ ಮಾದರಿಯ ಬಸ್ ನಿಲ್ದಾಣಗಳ ಗುಂಬಜ್ ಮೇಲೆ ಈಗ ರಾತ್ರಿ ಬೆಳಗಾಗುವಷ್ಟರಲ್ಲಿ ಕಳಶ ನಿರ್ಮಾಣ ಮಾಡಲಾಗಿದೆ. ಬಸ್ ನಿಲ್ದಾಣದ ಮೂರು ಗುಂಬಜ್ ಗಳ ಮೇಲೆ ಕಳಸ ನಿರ್ಮಿಸುವ ಮೂಲಕ ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಗರಂ ಆಗಿದ್ದಾರೆ.

ಗುಂಬಜ್ ಮೇಲೆ ಕಳಸ ಹೇಗೆ ಬಂತು– ಪ್ರತಾಪ್ ಸಿಂಹ ಪ್ರಶ್ನೆ

Exit mobile version