Home ತಾಜಾ ಸುದ್ದಿ ಖಡ್ಗ ಹಿಡಿದು ಸಂಭ್ರಮಿಸಿ ಅಂದರ್‌ ಆದ ಅಭಿಮಾನಿ

ಖಡ್ಗ ಹಿಡಿದು ಸಂಭ್ರಮಿಸಿ ಅಂದರ್‌ ಆದ ಅಭಿಮಾನಿ

0

ಬಿಜೆಪಿ ಕಾರ್ಯಕರ್ತನೊಬ್ಬ ಕೈಯಲ್ಲಿ ಖಡ್ಗ ಹಿಡಿದು ಸಂಭ್ರಮಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ನಗರ ಶಾಸಕನಾಗಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್‌ ಯತ್ನಾಳ್ ಗೆಲುವು ಸಾಧಿಸಿದ ಬೆನ್ನಲ್ಲೇ ಕಾರ್ಯಕರ್ತರು ಅತಿರೇಕದ ವರ್ತನೆ ತೋರಿದ್ದಾರೆ. ನಗರದ ಸಿದ್ದೇಶ್ವರ ದೇಗುಲದ ಬಳಿ ಕಾರ್ಯಕರ್ತನೊಬ್ಬ ಖಡ್ಗ ಹಿಡಿದುಕೊಂಡು ಓಡಾಡಿದ್ದಾನೆ. ಸದ್ಯ ರಸ್ತೆಯಲ್ಲಿ ಕತ್ತಿಯನ್ನು ಹಿಡಿದು ಓಡಾಡುವ ದೃಶ್ಯ ಎಲ್ಲೆಡೆ ವೈರಲ್‌ ಆಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.

Exit mobile version