Home ನಮ್ಮ ಜಿಲ್ಲೆ ಕ್ರಾಂತಿ ಆಡಿಯೋ ರಿಲೀಸ್‌ ದಾಂಧಲೆ-ಲಾಠಿ ಚಾರ್ಜ್‌

ಕ್ರಾಂತಿ ಆಡಿಯೋ ರಿಲೀಸ್‌ ದಾಂಧಲೆ-ಲಾಠಿ ಚಾರ್ಜ್‌

0

ವಿಜಯನಗರ: ದರ್ಶನ್ ಹಾಗೂ ಕ್ರಾಂತಿ ಚಿತ್ರ ತಂಡದ ಎದುರೇ ಯುವಕರು ದರ್ಶನ್‌ ಸಿನಿಮಾದ ಬ್ಯಾನರ್ ಹರಿದು ಹಾಕಿದ ಘಟನೆ ಇಂದು ನಡೆದಿದೆ.
ವಿಜಯನಗರದಲ್ಲಿ ದರ್ಶನ ಅಭಿನಯದ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡು ಲಾಂಚ್‌ಗೆ ಕ್ರಾಂತಿ ತಂಡ ಆಗಮಿಸಿತ್ತು. ಈ ಸಂದರ್ಭದಲ್ಲಿ ವಾಲ್ಮೀಕಿ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಅಪ್ಪು ಮತ್ತು ದರ್ಶನ ಬ್ಯಾನರ್‌ಗಳಿದ್ದವು. ಆದ್ರೆ ಅಪ್ಪು ಬ್ಯಾನರ್ ಮುಟ್ಟದೇ, ದರ್ಶನ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ. ಅಲ್ಲದೇ ಕಲ್ಲು ತೂರಾಟ ಕೂಡಾ ನಡೆದಿದೆ. ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವಕರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ವಿಜಯನಗರ ಪೊಲೀಸರು ಸೇರಿದಂತೆ ಡಿಎಆರ್‌ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಕ್ರಾಂತಿ ಆಡಿಯೋ ರಿಲೀಸ್‌ ದಾಂಧಲೆ-ಲಾಠಿ ಚಾರ್ಜ್‌

Exit mobile version