Home ನಮ್ಮ ಜಿಲ್ಲೆ ಕೋಲಾರ ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

0

ಕೋಲಾರ: ಇಲ್ಲಿನ ಕಾಂಗ್ರೆಸ್‌ ಕಚೇರಿ ಎದುರೇ ರಮೇಶ ಕುಮಾರ್‌ ಹಾಗೂ ಕೆ.ಎಚ್‌. ಮುನಿಯಪ್ಪ ಬಣದ ಮುಖಂಡರು, ಕಾರ್ಯಕರ್ತರು ಕೈ ಕೈ ಮಿಲಾಯಿಸಲು ಮುಂದಾದ ಘಟನೆ ಇಂದು ನಡೆಯಿತು.
ಸಿದ್ದರಾಮಯ್ಯನವರ ಸ್ಪರ್ಧೆ ನಿರ್ಧಾರ ಹೈಕಮಾಂಡ್‌ಗೆ ಬಿಡೋಣ. ಇಲ್ಲಿರೋ ನಾಯಕರು ಒತ್ತಡ ಹೇರೋದು ಬೇಡ. ಬೇರೆ ಕ್ಷೇತ್ರದ ನಾಯಕರಿಗೆ ಕೋಲಾರದ ಉಸಾಬರಿ ಏಕೆ ಬೇಕು ಎಂದು ಕೆ.ಎಚ್‌. ಮುನಿಯಪ್ಪ ಪ್ರಶ್ನಿಸಿದರು.
ಈ ವೇಳೆ, ಸಿದ್ದರಾಮಯ್ಯ ಮತ್ತು ಮುನಿಯಪ್ಪ ಪರ ಬೆಂಬಲಿಗರು ಪರಸ್ಪರ ಜೈಕಾರ ಹಾಕಿದರು. ಎರಡೂ ಕಡೆಯವರ ಮಧ್ಯೆ ಗೊಂದಲ ಉಂಟಾಗಿ, ಪರಸ್ಪರ ವಾಗ್ವಾದ, ನೂಕಾಟ, ತಳ್ಳಾಟ ನಡೆಯಿತು.
ಏತನ್ಮಧ್ಯೆ ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಲೆಂದೇ ಕೆಲವರು ಬೇಕಂತಲೇ ಸಭೆಗೆ ಬಂದಿದ್ದಾರೆ ಎಂದು ಕೆ.ಎಚ್. ಮುನಿಯಪ್ಪ ಬೆಂಬಲಿಗರು ಕಿಡಿಕಾರಿದರು. ಸ್ಥಳಕ್ಕೆ ಆಗಮಿಸಿದ ಕೋಲಾರ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಗೊಳಿಸಿದರು.

ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

Exit mobile version