Home ನಮ್ಮ ಜಿಲ್ಲೆ ಕೇಂದ್ರದಿಂದ ಕರ್ನಾಟಕಕ್ಕೆ 5,183 ಕೋಟಿ ಬಿಡುಗಡೆ

ಕೇಂದ್ರದಿಂದ ಕರ್ನಾಟಕಕ್ಕೆ 5,183 ಕೋಟಿ ಬಿಡುಗಡೆ

0

ಬೆಂಗಳೂರು: ಕೇಂದ್ರ ಸರ್ಕಾರವು ತೆರಿಗೆ ವಿತರಣೆಯ ಮತ್ತೊಂದು ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೇಂದ್ರ ಸರ್ಕಾರವು ತೆರಿಗೆ ವಿತರಣೆಯ ಮತ್ತೊಂದು ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಿದೆ.
ವಿವಿಧ ಸಮಾಜಿಕ ಕಲ್ಯಾಣ ಕ್ರಮಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸಲು ರಾಜ್ಯ ಸರ್ಕಾರಗಳ ಕೈಗಳನ್ನು ಬಲಪಡಿಸಲು ಒಟ್ಟು 1,42,122 ಕೋಟಿ ರೂ.ಗಳಷ್ಟು ಹಣ ಬಿಡುಗಡೆ ಮಾಡಿದೆ. ಈ ಮೂಲಕ ಕರ್ನಾಟಕಕ್ಕೆ 5,183 ಕೋಟಿ ರೂ.ಗಳಷ್ಟು ಹಣ ಬಿಡುಗಡೆಗೊಂಡಿದೆ ಎಂದಿದ್ದಾರೆ.

Exit mobile version