Home ತಾಜಾ ಸುದ್ದಿ ಕಲಘಟಗಿಯಲ್ಲಿ ಜನ ಶಕ್ತಿ, ಹಣ ಶಕ್ತಿಯ ನಡುವೆ ಸಂಘರ್ಷ

ಕಲಘಟಗಿಯಲ್ಲಿ ಜನ ಶಕ್ತಿ, ಹಣ ಶಕ್ತಿಯ ನಡುವೆ ಸಂಘರ್ಷ

0

ಧಾರವಾಡ: ಕಲಘಟಗಿ ಜನರು ಹಣಕ್ಕಾಗಿ ಮತ ಮಾರಾಟ ಮಾಡುವುದಿಲ್ಲ ಅಂತ ತೀರ್ಮಾನ ಮಾಡಿ, ನಾಗರಾಜ ಛಬ್ಬಿಯ ಜನ ಶಕ್ತಿ ಹಾಗೂ ಹಣ ಶಕ್ತಿಯ ನಡುವೆ ಸಂಘರ್ಷ ನಡೆಯುತ್ತಿದೆ‌. ಮೇ 10ಕ್ಕೆ ಜನ ಶಕ್ತಿಯ ಎದುರು ಹಣ ಶಕ್ತಿ ಸೋಲಲಿದೆ ಅಂತ ತೋರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
ಕಲಘಟಗಿಯಲ್ಲಿ ಕ್ಷೇತ್ರದ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಚುನಾವಣೆ ಅಂತಿಮ ಘಟ್ಟ ತಲುಪಿದೆ. ಈ ಕ್ಷೇತ್ರದ ಜನರು ಅತ್ಯಂತ ಸಜ್ಜನರು. ಈ ಕ್ಷೇತ್ರದ ಜನರನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ. ಕಳೆದ ಐದು ವರ್ಷ ನಮ್ಮ ಶಾಸಕರು ಉತ್ತಮ ಅಡಿಪಾಯ ಹಾಕಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಮಾಡಬೇಕಿದೆ. ಆ ಕಾರಣಕ್ಕೆ ನಮ್ಮ ರಾಷ್ಟ್ರೀಯ ನಾಯಕರು ಅವರನ್ನು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಕರೆತಂದು ಟಿಕೆಟ್ ಕೊಟ್ಟಿದ್ದಾರೆ. ನಾಗರಾಜ ಛಬ್ಬಿ ಆಯ್ಕೆಯಾದ ಮೇಲೆ ಇಲ್ಲಿನ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.

Exit mobile version