Home ನಮ್ಮ ಜಿಲ್ಲೆ ಕೊಪ್ಪಳ ಕನ್ನಡ ಬರೆಯಲು ತಡಕಾಡಿದ ತಂಗಡಗಿ

ಕನ್ನಡ ಬರೆಯಲು ತಡಕಾಡಿದ ತಂಗಡಗಿ

0

ಕೊಪ್ಪಳ: ಕನ್ನಡ ಪದವನ್ನು ಬರೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಡಕಾಡಿದ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಶಿವರಾಜ ತಂಗಡಗಿ ‘ಶುಭವಾಗಲಿ’ ಎಂದು ಬೋರ್ಡ್​ ಮೇಲೆ ಬರೆಯಲು ಮುಂದಾಗಿದ್ದಾರೆ. ಈ ವೇಳೆ, ಶುಭವಾಗಲಿ ಎಂದು ಸರಿಯಾಗಿ ಬರೆಯಲಾಗದೆ ಸಚಿವರು ಯಡವಟ್ಟು ಮಾಡಿಕೊಂಡಿದ್ದಾರೆ.
ಸಚಿವರು ತಪ್ಪಾಗಿ ಬರೆಯುತ್ತಿದ್ದರೂ ಅವರ ಸುತ್ತಲಿದ್ದವರು ಅದನ್ನು ಸರಿಪಡಿಸದೆ ಚಪ್ಪಾಳೆ ತಟ್ಟುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಬಳಿಕ ಅವರ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು ಸರಿಯಾದ ರೂಪದಲ್ಲಿ ಬರೆಸಿದ್ದಾರೆ.

Exit mobile version