Home ತಾಜಾ ಸುದ್ದಿ ಎಸ್.ಡಿ.ಪಿ.ಐ ಹೇಳಿಕೆಗಳನ್ನು ಗಮನಿಸಿ ಕಾನೂನಿನ ಕ್ರಮ : ಸಿಎಂ ಬೊಮ್ಮಾಯಿ

ಎಸ್.ಡಿ.ಪಿ.ಐ ಹೇಳಿಕೆಗಳನ್ನು ಗಮನಿಸಿ ಕಾನೂನಿನ ಕ್ರಮ : ಸಿಎಂ ಬೊಮ್ಮಾಯಿ

0
CM

ಬೆಳಗಾವಿ: ಎಸ್.ಡಿ.ಪಿ.ಐ ಹೇಳಿಕೆಗಳನ್ನು ಗಮನಿಸಿ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಎಸ್.ಡಿ.ಪಿ.ಐ ಅಲ್ಪಸಂಖ್ಯಾತರ ವಿರೋಧಿಯಾಗಿರುವ ಒಂದು ದೇಶದ್ರೋಹಿ ಸಂಸ್ಥೆ . ಅವರಿಂದ ನಾವು ಮೆಚ್ಚುಗೆ ಬಯಸುವುದೂ ಇಲ್ಲ.ಅವರು ಸದಾ ನಮ್ಮ ಚಿಂತನೆ, ವಿಚಾರಗಳಿಗೆ ವಿರುದ್ಧ ಇದ್ದಾರೆ. ಅದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದರು
ಏಪ್ರಿಲ್ ಮೊದಲ ವಾರದಲ್ಲಿ ಬಿಜೆಪಿ ಪಟ್ಟಿ
ಬಿಜೆಪಿ ಪಟ್ಟಿ ಬಹುತೇಕವಾಗಿ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂದರು.
ಕಾಂಗ್ರೆಸ್ ದಿವಾಳಿಯಾಗಿದೆ
ಕಳೆದ 2-3 ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡಿ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಬಳಿ ಸರಿಯಾದ ಅಭ್ಯರ್ಥಿ ಇಲ್ಲದೆ ಹತಾಶರಾಗಿದ್ದಾರೆ. ಹಾಗಾಗಿ ನಮ್ಮ ಪಕ್ಷದವರಿಗೆ ಫೋನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ದಿವಾಲಿಯಾಗಿದೆ ಎಂದು ಇದರಿಂದಾಗಿ ಸ್ಪಷ್ಟವಾಗುತ್ತದೆ ಎಂದರು.

Exit mobile version