Home ಅಪರಾಧ ಇಂದಿರಾ ಗ್ಲಾಸ್ ಹೌಸ್ ಬಾವಿಯಲ್ಲಿ ಶವ ಪತ್ತೆ

ಇಂದಿರಾ ಗ್ಲಾಸ್ ಹೌಸ್ ಬಾವಿಯಲ್ಲಿ ಶವ ಪತ್ತೆ

0

ಮಾರಾಕಸ್ತ್ರಗಳಿಂದ ಕೊಯ್ದು ಕೊಲೆ ಮಾಡಿರುವ ಶಂಕೆ

ಹುಬ್ಬಳ್ಳಿ: ನಗರದ ಇಂದಿರಾ ಗ್ಲಾಸ್ ಹೌಸ್ ಪಕ್ಕದಲ್ಲಿರುವ ಬಾವಿಯಲ್ಲಿ ಯುವಕನೋರ್ವನ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಗಿರಣಿಚಾಳ ನಿವಾಸಿ ಹುಲ್ಲೇಶ ಹಾಲಹರವಿ (37) ಎಂದು ಗುರುತಿಸಲಾಗಿದ್ದು, ಸ್ಥಳೀಯರು ಬಾವಿಯಲ್ಲಿದ್ದ ಶವವನ್ನು ನೋಡಿ ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಿಪಿಐ ಎಂ.ಎಸ್ ಹೂಗಾರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವಕನ ಕುತ್ತಿಗೆಯಲ್ಲಿ ಮಾರಕಾಸ್ತ್ರದಿಂದ ಕೊಯ್ದಿರುವ ಗುರುತು ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Exit mobile version