Home ನಮ್ಮ ಜಿಲ್ಲೆ ಕೊಪ್ಪಳ ಆರ್‌ಸಿಬಿ ಸಮಾವೇಶಕ್ಕೆ ಹೆಚ್ಚು ಜನ ಪಾಲ್ಗೊಳ್ಳಿ

ಆರ್‌ಸಿಬಿ ಸಮಾವೇಶಕ್ಕೆ ಹೆಚ್ಚು ಜನ ಪಾಲ್ಗೊಳ್ಳಿ

0

ಕೊಪ್ಪಳ: ಬಾಗಲಕೋಟೆಯಲ್ಲಿ ಅ. 20ರಂದು ರಾಯಣ್ಣ, ಚೆನ್ನಮ್ಮ ಬ್ರಿಗೇಡಿನ ಬೃಹತ್ ಪೂರ್ವಬಾವಿ ಸಭೆ ನಡೆಯಲಿದೆ. ಆ ಸಭೆಯಲ್ಲಿ 5ರಿಂದ 10 ಸಾವಿರ ಜನ ಸೇರಲಿದ್ದಾರೆ. 50ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಲಿದ್ದು, ಕೊಪ್ಪಳ ಜಿಲ್ಲೆಯಿಂದಲೂ ಬಹಳಷ್ಟು ಜನರು ಭಾಗವಹಿಸಬೇಕು ಎಂದು ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಮುಖಂಡ ಕಾಂತೇಶ್ ಈಶ್ವರಪ್ಪ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ರಾಯಣ್ಣ ಚೆನ್ನಮ್ಮ ಬ್ರಿಗೇಡಿನ ಬಾಗಲಕೋಟೆಯ ಬೃಹತ್ ಸಮಾವೇಶ ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಜನಪ್ರತಿನಿಧಿಯಲ್ಲ, ಆದರೂ ಇಷ್ಟು ಜನ ಬಂದಿದ್ದೀರಿ. ಇದು ಹೆಮ್ಮೆಯ ಸಂಗತಿಯಾಗಿದೆ. ರಾಜ್ಯದಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ. ಪಕ್ಕದಲ್ಲಿ ಇದ್ದುಕೊಂಡೇ ನನ್ನನ್ನು ರಾಜಕೀಯವಾಗಿ ತುಳಿದರು. ಹಾಗಾಗಿ ದಲಿತರು ಮತ್ತು ಹಿಂದುಳಿದವರಿಗಾಗಿ ಸಂಘಟನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಶಾಸಕ ಅಥವಾ ಸಂಸದನಾಗುತ್ತೇನೆ ಎಂದರು.

Exit mobile version