Home ನಮ್ಮ ಜಿಲ್ಲೆ ಉತ್ತರ ಕನ್ನಡ ಆಟೋದಲ್ಲಿ ಸಾಗಿಸುತ್ತಿದ್ದ 93.5 ಲಕ್ಷ ರೂ. ವಶಕ್ಕೆ

ಆಟೋದಲ್ಲಿ ಸಾಗಿಸುತ್ತಿದ್ದ 93.5 ಲಕ್ಷ ರೂ. ವಶಕ್ಕೆ

0

ಕಾರವಾರ: ಆಟೋದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ೯೩.೫ ಲಕ್ಷ ಹಣವನ್ನು ಹೊನ್ನಾವರದ ಚಂದಾವರ ನಾಕಾ ಬಳಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ.
ಕುಮಟಾ ಕಾಗಲ್ ಮೂಲದ ರವಿ ಪಂಡಿತ್, ಆಟೋ ಚಾಲಕ ಶಿವಮೊಗ್ಗದ ಭರತ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದಿಂದ ರಾತ್ರಿ ೨ ಗಂಟೆ ಸುಮಾರಿಗೆ ಆಗಮಿಸಿದ ಆಟೋವನ್ನು ಹೊನ್ನಾವರ ತಾಲೂಕಿನ ಚಂದಾವರ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ಪರಿಶೀಲಿಸಿದಾಗ ಬ್ಯಾಗ್ ಪತ್ತೆಯಾಗಿದೆ. ಅದರಲ್ಲಿ ದಾಖಲೆ ಇಲ್ಲದೆ ೯೩.೫ ಲಕ್ಷ ರೂ. ಪತ್ತೆಯಾಗಿದ್ದು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಹಣ, ಆಟೋ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version