Home ನಮ್ಮ ಜಿಲ್ಲೆ ದಾವಣಗೆರೆ ಅವಕಾಶ ಸಿಕ್ಕರೆ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ: ಸಿದ್ದೇಶ್ವರ್

ಅವಕಾಶ ಸಿಕ್ಕರೆ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ: ಸಿದ್ದೇಶ್ವರ್

0

ದಾವಣಗೆರೆ: ರಾಷ್ಟ್ರ, ರಾಜ್ಯ ನಾಯಕರು ಅವಕಾಶ ನೀಡಿದಲ್ಲಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ಲೋಕಸಭೆ ಇಲ್ಲವೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳಿದರೆ ಸ್ಪರ್ಧಿಸುತ್ತೇನೆ. ಏನೂ ಬೇಡ ಮನೆಯಲ್ಲೇ ಇರಿ ಎಂದರೂ ಮನೆಯಲ್ಲೇ ಇರುತ್ತೇನೆ. ಪಕ್ಷವು ನಾನು ಮತ್ತು ತಂದೆ ಮಲ್ಲಿಕಾರ್ಜುನಪ್ಪ ಅವರಿಗೆ ಸತತ 7 ಬಾರಿ ಲೋಕಸಭೆಗೆ ಟಿಕೆಟ್ ನೀಡಿದೆ. 6 ಬಾರಿ ಗೆದ್ದಿದ್ದೇವೆ. ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಮುಖಂಡರು ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯ ರಾಜಕಾರಣಕ್ಕೆ ಬರುವುದಕ್ಕೆ ಇಷ್ಟ ಇಲ್ಲ. ಆದರೆ, ಪಕ್ಷ ಹೇಗೆ ಹೇಳುತ್ತದೋ ಹಾಗೆಯೇ ನಡೆದುಕೊಳ್ಳುತ್ತೇನೆ. ಪಕ್ಷಕ್ಕೆ ವ್ಯತಿರಿಕ್ತವಾಗಿ ಏನೂ ಮಾಡಲಾಗದು ಎಂದು ಅವರು ಹೇಳಿದರು.

Exit mobile version