Home ನಮ್ಮ ಜಿಲ್ಲೆ ಕೋಲಾರ ಅನುಚಿತ ವರ್ತನೆ – ಶಿಕ್ಷಕನಿಗೆ ಧರ್ಮದೇಟು

ಅನುಚಿತ ವರ್ತನೆ – ಶಿಕ್ಷಕನಿಗೆ ಧರ್ಮದೇಟು

0
Teacher

ಕೋಲಾರ: ಹತ್ತನೇಯ ತರಗತಿ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ ಶಿಕ್ಷಕನಿಗೆ ಪೋಷಕರು ಬಿಇಒ ಎದುರೇ ಧರ್ಮದೇಟು ನೀಡಿದ ಘಟನೆ ನರಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ನಡೆದಿದೆ.
ಶಿಕ್ಷಕ ಪ್ರಕಾಶ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಆತನನ್ನು ಕೂಡಲೇ ಅಮಾನತು ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಣ್ಣಯ್ಯ ಕ್ರಮದ ಭರವಸೆ ನೀಡಿದ್ದಾರೆ. ಈ ಹಿಂದೆ ಕೆಲಸ ಮಾಡಿದ ಶಾಲೆಯಲ್ಲೂ ಈ ಶಿಕ್ಷಕ ಇದೇ ರೀತಿ ವರ್ತನೆ ತೋರಿ ಅಮಾನತಾಗಿದ್ದ. ಆ ವರ್ತನೆ ಈಗ ಪುನರಾವರ್ತನೆಯಾಗಿದೆ.

Exit mobile version