Home ತಾಜಾ ಸುದ್ದಿ ಅಕ್ಕಿ ವಿಚಾರ: ಸಿದ್ದರಾಮಯ್ಯ ಕೇಂದ್ರದ ಮೇಲೆ ದೂರುವುದಕ್ಕಿಂತ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ

ಅಕ್ಕಿ ವಿಚಾರ: ಸಿದ್ದರಾಮಯ್ಯ ಕೇಂದ್ರದ ಮೇಲೆ ದೂರುವುದಕ್ಕಿಂತ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ

0

ಹುಬ್ಬಳ್ಳಿ: ಅಕ್ಕಿ ವಿಚಾರದಲ್ಲಿ ನಾನು ಹಲವಾರಿ ಬಾರಿ ಮಾತಾಡಿದ್ದೇನೆ. ಭಾರತ ಸರ್ಕಾರ ಇಡೀ ದೇಶದಲ್ಲಿ ಐದು ಕೆಜಿ ಅಕ್ಕಿ ಕೊಡುತ್ತಿದೆ‌. ಕರ್ನಾಟಕದಲ್ಲೂ ನಾವು ಐದು ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಇದು ಸಿದ್ದರಾಮಯ್ಯನವರ ಅಕ್ಕಿ ಅಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ‌ಸಿದ್ದರಾಮಯ್ಯ ಅವರು, ಹತ್ತು ಕೆಜಿ ಅವರು ಕೊಡ್ತೀನಿ ಅಂದಿದ್ರು, ವೋಟ್ ತಗೋಬೇಕಾದ್ರೆ ಕೇಂದ್ರದ ಅಕ್ಕಿ ಬಗ್ಗೆ ಸ್ಪಷ್ಟಪಡಿಸಿಲ್ಲ. ಇದೀಗ ಅಕ್ಕಿ ಕೊಡ್ತಿಲ್ಲ ಅಂತಾ ಹೇಳ್ತಿದಾರೆ. ಭಾರತ ಸರ್ಕಾರ ಅಕ್ಕಿ ಕೊಡುತ್ತಿದೆ.‌ಇವರು ಕೊಡಬೇಕಾದ ಹತ್ತು ಕೆಜಿ ಕೊಡಲಿ ಎಂದರು.
ಉತ್ತರ ಪ್ರದೇಶ,ಮದ್ಯಪ್ರದೇಶದವರು ಅಕ್ಕಿ ಕೇಳ್ತೀದಾರೆ, ನಾವು ಅವರಿಗೂ ಅಕ್ಕಿ ಕೊಟ್ಟಿಲ್ಲ. ಇಷ್ಟು ಪ್ರಮಾಣದ ಅಕ್ಕಿ ಸ್ಟಾಕ್ ಇರಬೇಕು ಎಂಬ ನಿಯಮವಿದೆ. ಆದ್ದರಿಂದ‌ ಯಾರಿಗೂ ಅಕ್ಕಿ ಕೊಟ್ಟಿಲ್ಲ. ಗ್ಯಾರಂಟಿ ವಿಚಾರದಲ್ಲಿ ದಿನಾ ಒಂದು ಕಂಡೀಷನ್ ಹಾಕಿ‌ ಜನರಿಗೆ ಮೋಸ ಮಾಡುವ ಕೆಲಸ‌ ಮಾಡಲಾಗುತ್ತಿದೆ. ಇದರಿಂದ ಮೋದಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸೋ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದರು.
ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು ವಿಚಾರ: ಮೋದಿ ಅವರ ಬಗ್ಗೆ ಬಾಯಿಗೆ ಬಂದಂತೆ ಬೈದಿದ್ದಾರೆ
ಸೋಶಿಯಲ್ ಮೀಡಿಯಾದಲ್ಲಿ ಬೈದಿದ್ದಾರೆ. ಸರ್ಕಾರದ ವಿರುದ್ದ ಮಾತಾಡಿದ್ರೆ ಕ್ರಮ ಅನ್ನೋದು ಸರ್ವಾಧಿಕಾರದ ಪ್ರತೀಕ ಎಂದ ಜೋಶಿ ಅವರು, ಇದೆಲ್ಲ ನಡೆಯಲ್ಲ. ಇಂದಿರಾಗಾಂದಿ ಅವರ ಎಮರ್ಜೆನ್ಸಿ ಕಾಲ ಹೋಗಿದೆ ಎಂದರಲ್ಲದೇ ಇದು ಸಿದ್ದರಾಮಯ್ಯ ನವರ ಸರ್ವಾಧಿಕಾರಿ, ಹಿಟ್ಲರ್ ಪ್ರವೃತಿ ತೋರಿಸುತ್ತದೆ. ಜನ ನಿಮಗೆ ತೀರ್ಪು ಕೊಟ್ಟಿದ್ದಾರೆ. ವಿನಮೃತೆಯಿಂದ ಮಾತಾಡಿ ಎಂದರು.
ಸಚಿವ ಸತೀಶ್ ಜಾರಕಿಹೊಳಿ‌ ಮಾತಾಡಿರೋದು ಜೋಕ್ ರೀತಿ‌ಇದೆ. ಮಂತ್ರಿಗಳೆಲ್ಲ ಹೀಗೆ ಮಾತಾಡ್ತಾರೆ ಅಂದ್ರೆ ಹೇಗೆ. ಸೀರಿಯಸ್ ಇಲ್ಲದೆ ಅಕ್ಕಿ ವಿಷಯದಲ್ಲಿ ಮಾತಾಡ್ತಾರೆ, ಹ್ಯಾಕ್ ಮಾಡಲಾಗಿದೆ ಎನ್ನುವುದು ಸೇರಿ ಇವಿಎಂ ಬಗ್ಗೆ ಮಾತನಾಡುತ್ತಾರೆ. ಚುನಾವಣಾ ಆಯೋಗ ಜಾರಕಿಹೊಳಿ‌ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು. ಸುಮ್ಮನೆ ಹುಚ್ಚರ ತರಹ ಮಾತಾಡಬೇಡಿ. ಸಿದ್ದರಾಮಯ್ಯ,ಜಾರಕಿಹೊಳಿ‌ ಅವರೇ 135 ಸೀಟ್ ಸಿಕ್ಕಿದ್ದು ಇವಿಎಂನಿಂದ ಎಂಬುದು ನೆನಪಿರಲಿ ಎಂದರು.
ಮುನೇನಕೊಪ್ಪ ಕಾಂಗ್ರೆಸ್ ಗೆ ಹೋಗಲ್ಲ:
ಮಾಜಿ‌ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬುದು ಸುಳ್ಳು. ಅವರು ಭಾರತೀಯ ಜನತಾ ಪಾರ್ಟಿ ಕೆಳಮಟ್ಟದ ಕಾರ್ಯಕರ್ತರು. ಅವರು ಕಾಂಗ್ರೆಸ್ ಗೆ ಹೋಗಲ್ಲ,ಅವರು ನನಗೆ ಸಿಕ್ಕಿದ್ದಾರೆ. ಬಿಜೆಪಿ ನಾಯಕರಾಗಿ‌ ಮುಂದುವರೆಯುತ್ತಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋಗೋದು ಚರ್ಚೆ ಆಗಿರಲಿಲ್ಲ. ಹಾಗಾಗಿ ಶೆಟ್ಟರ್ ಗೆ ಮುನೇನಕೊಪ್ಪ ಅವರಿಗೆ ಹೋಲಿಕೆ ಮಾಡೋದು ಸರಿ‌ ಅಲ್ಲ ಎಂದು ಜೋಶಿ ಹೇಳಿದರು.

Exit mobile version