Home News PFI ನಿಷೇಧ: ಸಿದ್ದು, ಡಿಕೆಶಿ ಸ್ವಾಗತ

PFI ನಿಷೇಧ: ಸಿದ್ದು, ಡಿಕೆಶಿ ಸ್ವಾಗತ

PFI

ಪಿಎಫ್ಐ ಸಂಘಟನೆ ನಿಷೇಧಿಸಿರುವುದನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಯಾವುದೇ ಸಂಘಟನೆ ಯಾದರೂ ಸರಿ ಅದನ್ನು ನಿಷೇಧಿಸುವುದಕ್ಕೆ ನಮ್ಮ ಯಾವ ವಿರೋಧವೂ ಇಲ್ಲ. ಶಾಂತಿ ಹಾಳು ಮಾಡುವವರ ವಿರುದ್ಧ ಕ್ರಮ ಜರುಗಿಸಲಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾನೂನು ವಿರುದ್ಧವಾಗಿ ಇರುವವರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರು, ಯಾರು ರಾಜ್ಯ, ದೇಶ ಭದ್ರತೆಗೆ ದಕ್ಕೆ ತರುತ್ತಾರೋ, ಅವರೆಲ್ಲ ಬ್ಯಾನ್ ಆಗಬೇಕು ಎಂದರು.

Exit mobile version