ಬೆಂಗಳೂರು: ಬೆಂಗಳೂರು ಜಲಮಂಡಳಿಯಲ್ಲಿ ಕೆಲಸ ಖಾಲಿ ಇದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1.15 ಲಕ್ಷ ವೇತನ ನಿಗದಿಗೊಳಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು.
ಬೆಂಗಳೂರು ಜಲಮಂಡಳಿ ಗುತ್ತಿಗೆ ಆಧಾರದ ಮೇಲೆ ಕಾನೂನು ಅಧಿಕಾರಿ ಹುದ್ದೆಯನ್ನು ಭರ್ತಿ ಮಾಡಲಿದೆ.
ಸೇವಾ ವಿಷಯದಲ್ಲಿ ನುರಿತವಾಗಿರುವ ಅಭ್ಯರ್ಥಿಗಳು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅರ್ಜಿ ಸಲ್ಲಿಕೆ ಮಾಡಬಹುದು.
ಆಯ್ಕೆಯಾದ ಅಭ್ಯರ್ಥಿಗಳ ಗುತ್ತಿಗೆ ಅವಧಿ 2 ವರ್ಷಗಳು. ಮಾಸಿಕ ವೇತನ 1.5 ಲಕ್ಷ ರೂ.ಗಳು, ವಾಹನ ಭತ್ಯೆ 35 ಸಾವಿರ ರೂ.ಗಳು. ಮೊದಲು ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತಿದ್ದು, ಕಾರ್ಯ ನಿರ್ವಹಣೆಯ ಆಧಾರದ ಮೇಲೆ ಮತ್ತೊಂದು ವರ್ಷ ಮುಂದುವರೆಸಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡುವವರು ನ್ಯಾಯಾಂಗ ಇಲಾಖೆಯ ಜಿಲ್ಲಾ ನ್ಯಾಯಾಧೀಶರಾಗಿ ಕನಿಷ್ಠ 5 ವರ್ಷ ಕರ್ತವ್ಯ ನಿರ್ವಹಣೆ ಮಾಡಿ ನಿವೃತ್ತಿ ಹೊಂದಿರಬೇಕು. ಸೇವೆಯಿಂದ ವಜಾಗೊಂಡಿರಬಾರದು, ಯಾವುದೇ ಇಲಾಖಾ ವಿಚಾರಣೆ/ ಶಿಸ್ತುಕ್ರಮ ಎದುರಿಸುತ್ತಿರಬಾರದು.
ಅರ್ಜಿಯನ್ನು ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರದ ಪುಸ್ತಕದ ಪ್ರತಿಯೊಂದಿಗೆ ಸಲ್ಲಿಸಬೇಕು. ಆಸಕ್ತರು ಮುಚ್ಚಿದ ಲಕೋಟೆಯಲ್ಲಿ ಅರ್ಜಿಯನ್ನು ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, 1ನೇ ಮಹಡಿ, ಕಾವೇರಿ ಭವನ, ಕೆಜಿ ರಸ್ತೆ ಬೆಂಗಳೂರು ವಿಳಾಸಕ್ಕೆ ಕಳಿಸಬೇಕು.
ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಕಾನೂನು ಅಧಿಕಾರಿ ಹುದ್ದೆಯ ವಿದ್ಯಾರ್ಹತೆ, ಕಾರ್ಯ ವಿಧಾನ, ಇನ್ನಿತರ ಮಾಹಿತಿಗಾಗಿ ಬೆಂಗಳೂರು ಜಲಮಂಡಳಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ತಿಳಿಸಿದೆ.