Home News ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಘಟನೆ ವಿಜಯಪುರ ಜಿಲ್ಲೆಯ ತೀಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ಜರುಗಿದೆ. ಶತಾಯುಸಿ ದೇವೇಂದ್ರ ಶ್ಯಾಮರಾಯ ವಳಸಂಗ್‌ ಮತ್ತು ದುಂಡವ್ವ ಎಂಬುವವರೇ ಸಾವಿನಲ್ಲಿ ಒಂದಾದ ದಂಪತಿ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದೇವೇಂದ್ರ(105) ಇಂದು ನಸುಕಿನ ಜಾವ ಮೃತಪಟ್ಟಿದ್ದು, ಪತಿಯ ಸಾವಿನ ವಿಷಯ ತಿಳಿದ ಪತ್ನಿ ದುಂಡವ್ವ(87) ಹೃದಯಾಘಾತದಿಂದ ನಿಧನರಾದರು.

Exit mobile version