Home ತಾಜಾ ಸುದ್ದಿ ವೃದ್ಧೆಗೆ ಕಪಾಳಮೋಕ್ಷ ಮಾಡಿದ ನಿರ್ವಾಹಕಿ

ವೃದ್ಧೆಗೆ ಕಪಾಳಮೋಕ್ಷ ಮಾಡಿದ ನಿರ್ವಾಹಕಿ

0

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ನಿರ್ವಾಹಕಿಯೊಬ್ಬಳು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧೆಗೆ ಕಪಾಳಮೋಕ್ಷ ಮಾಡಿದ ಘಟನೆ ಕುಂದಗೋಳ ತಾಲೂಕಿನ ಶೆರೇವಾಡ ಬಳಿ ನಡೆದಿದೆ.
ಹುಬ್ಬಳ್ಳಿ ನಗರ ಘಟಕಕ್ಕೆ ಸೇರಿದ ಬಸ್ ಕುಂದಗೋಳ ತಾಲೂಕು ಬೆಟ್ಟದೂರಿನಿಂದ ಹುಬ್ಬಳ್ಳಿ ಕಡೆಗೆ ಗುರುವಾರ ಸಂಜೆ ಬರುತ್ತಿದ್ದಾಗ ಬಸ್ಸಿನಲ್ಲಿ ಹತ್ತಿದ್ದ ವೃದ್ಧೆ ಮತ್ತು ನಿರ್ವಾಹಕಿ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿದೆ. ಅತಿರೇಕಕ್ಕೆ ಹೋದಾಗ ವೃದ್ಧೆಗೆ ನಿರ್ವಾಹಕ ವೃದ್ಧೆಗೆ ಕಪಾಳಮೋಕ್ಷ ಮಾಡಿದ್ದಾರೆ. ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರು ಸೆರೆ ಹಿಡಿದ ಕಪಾಳಮೋಕ್ಷ ಮಾಡುವ ವಿಡಿಯೋ ವೈರಲ್ ಆಗಿದೆ. ಅಜ್ಜಿಯ ಮೇಲೆ ಹಲ್ಲೆ ನಡೆಸಿದ ವೇಳೆ ಸಹ ಪ್ರಯಾಣಿಕರು ಆಕ್ಷೇಪಿಸಿ ನಿರ್ವಾಹಕಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ವೃದ್ಧೆಯ ಮೇಲೆ ಹಲ್ಲೆ ಮಾಡಿದ ನಿರ್ವಾಹಕಿಗೆ ಹುಬ್ಬಳ್ಳಿ ನಗರ ಘಟಕದ ಡಿಪೋ ವ್ಯವಸ್ಥಾಪಕರು ನೋಟಿಸ್ ನೀಡಿದ್ದಾರೆ.

Exit mobile version