Home ತಾಜಾ ಸುದ್ದಿ ರಾಹುಲ್‌ ಬಂದ್ರೂ ಏನೂ ಎಫೆಕ್ಟ್‌ ಆಗಲ್ಲ

ರಾಹುಲ್‌ ಬಂದ್ರೂ ಏನೂ ಎಫೆಕ್ಟ್‌ ಆಗಲ್ಲ

0
cm

ಬೆಳಗಾವಿ: ರಾಹುಲ್‌ ಗಾಂಧಿ ಬರತಾರೆ, ಹೋಗತಾರೆ ಅದೇನೂ ಎಫೆಕ್ಟ್‌ ಆಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನವರಿಗೆ ಅವರದ್ದೇ ಗ್ಯಾರಂಟಿ ಇಲ್ಲ, ಕಾರ್ಡ್‌ ತೆಗೆದುಕೊಂಡು ಅದನ್ನು ಉಪ್ಪಿನಕಾಯಿ ಹಾಕಬೇಕಾ? ಅಧಿಕಾರಕ್ಕೂ ಬರಲ್ಲಾ, ಅನುಷ್ಠಾನವೂ ಆಗಲ್ಲ. ಅದು ಕಾರ್ಯಕ್ರಮವೂ ಅಲ್ಲಾ ಇದು‌ ಕೇವಲ ಜನರನ್ನು ಮರಳು‌ ಮಾಡುವ ಕೆಲಸ ಎಂದರು.
ಇನ್ನು ಸಚಿವ ವಿ. ಸೋಮಣ್ಣ ದೆಹಲಿಗೆ ಹೋಗಿದ್ದು ನನಗೆ ಹೇಳಿಯೇ ಹೋಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‌ಭೇಟಿಯಾಗಲಿದ್ದಾರೆ ಎಂದರು.

Exit mobile version