Home ತಾಜಾ ಸುದ್ದಿ ರಾಜಕೀಯ ಸಂಚಲನ ಸೃಷ್ಟಿಸಿದ ಎಸ್ಸೆಸ್ಸೆಂ-ರೇಣು ಭೇಟಿ

ರಾಜಕೀಯ ಸಂಚಲನ ಸೃಷ್ಟಿಸಿದ ಎಸ್ಸೆಸ್ಸೆಂ-ರೇಣು ಭೇಟಿ

0

ದಾವಣಗೆರೆ: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಬಿಜೆಪಿಯಲ್ಲಿ ರೋಸಿ ಹೋಗಿರುವ ಬಹಳಷ್ಟು ಜನ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಅವರೆಲ್ಲಾ ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಅದೇ ರೀತಿ ರೇಣುಕಾಚಾರ್ಯ ಕೂಡ ರೋಸಿ ಹೋಗಿದ್ದಾರೆ. ಅವರನ್ನು ಪಕ್ಷಕ್ಕೆ ಆಹ್ವಾನಿಸಿದರೆ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ರೇಣುಚಾರ್ಯ ಭೇಟಿಯ ನಂತರದಲ್ಲಿ ಸುದ್ದಿಗಾರರಿಗೆ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕೆಂಬ ಇಚ್ಛೆ ನಮ್ಮದು. ಇದೇ ಹೊತ್ತಲ್ಲಿ ಬಿಜೆಪಿಯಲ್ಲಿ ರೋಸಿ ಹೋಗಿರುವ ಹಲವಾರು ಜನರು ಕಾಂಗ್ರೆಸ್ ಕಡೆಗೆ ವಾಲಿದ್ದಾರೆ. ರೇಣುಕಾಚಾರ್ಯ ಕೂಡ ಬಿಜೆಪಿ ನಡೆಗೆ ಬೇಸತ್ತಿರುವುದರಿಂದ ಅವರಿಗೆ ಆಹ್ವಾನಿಸಿದ್ದೇವೆ. ಅವರೇನು ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ ಎಂದರು.

Exit mobile version