Home ತಾಜಾ ಸುದ್ದಿ ಮೋದಿ ಸರ್ಕಾರಕ್ಕೆ ಸುಮಲತಾ ಬೆಂಬಲ

ಮೋದಿ ಸರ್ಕಾರಕ್ಕೆ ಸುಮಲತಾ ಬೆಂಬಲ

0

ಮಂಡ್ಯ: ಯಾರ ಮೇಲೂ ದ್ವೇಷ ಸಾಧಿಸಲು ನಾನು ರಾಜಕೀಯಕ್ಕೆ ಬಂದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಂಬರೀಷ್ ಮಾಡಿರುವ ಸೇವೆಗಳನ್ನು ಮುಂದುವರಿಸಲಷ್ಟೇ ನಾನು ರಾಜಕೀಯಕ್ಕೆ ಬಂದಿದ್ದು. ಅದನ್ನು ಮುಂದೆಯೂ ಮಾಡುತ್ತೇನೆ. ಈಗ ಬದಲಾದ ರಾಜಕೀಯ ಸಂದರ್ಭದಲ್ಲಿ ನನಗೆ ಇನ್ನಷ್ಟು ಶಕ್ತಿಯ ಅವಶ್ಯಕತೆಯಿದೆ. ಸವಾಲುಗಳ ಹಾದಿಯನ್ನೇ ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಸವಾಲುಗಳನ್ನು ಮೆಟ್ಟಿದಾಗಲೇ ಸಾಧನೆಗಳಾಗೋದು. ನನಗೆ ನನ್ನ ಭವಿಷ್ಯ ಮಾತ್ರ ನನಗೆ ಮುಖ್ಯವಲ್ಲ. ನನ್ನ ಗೆಲ್ಲಿಸಿದ ಜನರ ಭವಿಷ್ಯವೂ ನನಗೆ ಮುಖ್ಯ. ನಾನು ಪೂಜಿಸುವ ಅಂಬರೀಷ್ ಅವರು ತಮ್ಮ ಬೆಂಬಲವನ್ನು ನೀಡಿರುತ್ತಾರೆ ಎಂದು ನಂಬಿ ನಾನು ಈ ಮೂಲಕ, ನಾನು ಬಿಜೆಪಿಗೆ ಬೆಂಬಲ ಕೊಡುವುದಾಗಿ ಘೋಷಿಸುತ್ತೇನೆ. ಇವತ್ತಿನಿಂದ ನನ್ನ ಸಂಪೂರ್ಣವಾದ ಬೆಂಬಲ, ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರಕ್ಕೆ, ಬಿಜೆಪಿ ಸರ್ಕಾರಕ್ಕೆ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Exit mobile version