Home News ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ

ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕ

ಚಿತ್ರದುರ್ಗ: ಶ್ರೀ ಮುರುಘಾರಾಜೇಂದ್ರ ಬೃಹನ್ಮಠದ ಪೂಜಾ, ಸೇವಾ, ಧಾರ್ಮಿಕ ಕೈಂಕರ್ಯ ನಡೆಸಿಕೊಂಡು ಹೋಗಲು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರನ್ನು ಸದ್ಯದ ಪರಿಸ್ಥಿತಿಗೆ ನೇಮಕ ಮಾಡಿ ಪೀಠಾಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು ನೇಮಕ ಮಾಡಿದ್ದಾರೆ.
ಹೈಕೋರ್ಟ್ ಆದೇಶದಂತೆ ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ಮಠದ ಪರಂಪರೆಯಂತೆ ದೈನಂದಿನ ಕೈಂಕರ್ಯಗಳನ್ನು ತಮ್ಮ ಅನುಪಸ್ಥಿತಿಯಲ್ಲಿ, ಭಕ್ತರ ಆಶಯದಂತೆ ಮುಂದುವರೆಸಿಕೊಂಡು ಹೋಗಲು ಅ. 15ರಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳಿಗೆ ಪತ್ರ ನೀಡಿದ್ದಾರೆ ಎಂದು ವೀರಶೈವ ಮುಖಂಡ ಜೀತೇಂದ್ರ ತಿಳಿಸಿದ್ದಾರೆ.

Exit mobile version