Home ತಾಜಾ ಸುದ್ದಿ ಮದರಸಾ ಶಾಲೆಗಳನ್ನು ಬಂದ್ ಮಾಡುವುದು ಅಸಾಧ್ಯ

ಮದರಸಾ ಶಾಲೆಗಳನ್ನು ಬಂದ್ ಮಾಡುವುದು ಅಸಾಧ್ಯ

0

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮದರಸಾ ಬಂದ್ ಮಾಡಲಾಗುವುದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಮೀಪ ಬಂದಿರುವುದರಿಂದ ಇಂತಹ ಹೇಳಿಕೆ ನೀಡುತ್ತಾರೆ. ಬಿಜೆಪಿಗೆ ವಿಷಯಗಳು ಬೇಕು. ಹೀಗಾಗಿ ಅವರು ಈ ರೀತಿಯ ವಿಷಯಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಅವರಿಗೆ ಏನಾದರೂ ವಿಷಯ ಬೇಕು, ಚುನಾವಣೆ ಬಂತು ಅಂದರೆ ಏನಾದರೂ ಹೇಳುತ್ತಾರೆ. ಮದರಸಾ ಬಂದ್ ಮಾಡುವುದಕ್ಕೆ ಆಗುವುದಿಲ್ಲ, ಅವು ನಿರಂತರವಾಗಿ ನಡೆದುಕೊಂಡು ಬಂದಿರುವ ಶಾಲೆಗಳು ಎಂದರು.

Exit mobile version