Home ತಾಜಾ ಸುದ್ದಿ ಮತ್ತೆ ಬಿಜೆಪಿ ಸರ್ಕಾರ, ಮತ್ತೆ ಲಿಂಗಾಯತರೇ ಸಿಎಂ

ಮತ್ತೆ ಬಿಜೆಪಿ ಸರ್ಕಾರ, ಮತ್ತೆ ಲಿಂಗಾಯತರೇ ಸಿಎಂ

0
Yatnal

ನವಲಗುಂದ: ರಾಜ್ಯದಲ್ಲಿ ಬಿಜೆಪಿ ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಜೋಶಿಯವರೂ ಆಗುವುದಿಲ್ಲ. ಸಂತೋಷ ಅವರೂ ಮುಖ್ಯಮಂತ್ರಿ ಆಗಲ್ಲ. ಮತ್ತೆ ಲಿಂಗಾಯತರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.
ನವಲಗುಂದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರಿದ ಶೆಟ್ಟರ ವಿರುದ್ಧ ವಾಗ್ದಾಳಿ ನಡೆಸಿದರು, ಶೆಟ್ಟರ ಅವರು ತತ್ವ, ಸಿದ್ದಾಂತ ಇಲ್ಲದ, ದೇಶ ವಿರೋಧಿ, 2047ಕ್ಕೆ ಭಾರತ ದೇಶವನ್ನು ಇಸ್ಲಾಮೀಕರಣ ಮಾಡುವ ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.

Exit mobile version