Home ತಾಜಾ ಸುದ್ದಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಹುಂಡಿಯಲ್ಲಿ 1,98 ಕೋಟಿ ಹಣ, 129ಗ್ರಾಂ ಚಿನ್ನ, 810ಗ್ರಾಂ ಬೆಳ್ಳಿ ಸಂಗ್ರಹ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಹುಂಡಿಯಲ್ಲಿ 1,98 ಕೋಟಿ ಹಣ, 129ಗ್ರಾಂ ಚಿನ್ನ, 810ಗ್ರಾಂ ಬೆಳ್ಳಿ ಸಂಗ್ರಹ

0

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಶ್ರೀರಾಯರ ಹುಂಡಿಗೆ ಅಕ್ಟೋಬರ್ ತಿಂಗಳ 20 ದಿನಗಳಿಂದ ಭಕ್ತರು ಹಾಕಿರುವ ಕಾಣಿಕೆಯನ್ನು ವಿವಿಧ ಭಜನಾ ಮಂಡಳಿ ಹಾಗೂ ಸೇವಾ ಕಾರ್ಯಕರ್ತರು ಏಣಿಕೆ ಕಾರ್ಯ ನಡೆಸಿದರು.
1,93,77,054 ಮೊತ್ತದ ನೋಟುಗಳು ಹಾಗೂ 4.40,660 ರೂ.ಗಳ ಮೊತ್ತದ ನಾಣ್ಯಗಳು ಸೇರಿದಂತೆ ಒಟ್ಟು 1,98,17,614 ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಅಲ್ಲದೇ 129 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿಯನ್ನು ಭಕ್ತರು ರಾಯರು ಹುಂಡಿಗೆ ಕಾಣಿಕೆ ರೂಪದಲ್ಲಿ ಹಾಕಿದ್ದಾರೆ ಎಂದು ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version