Home ತಾಜಾ ಸುದ್ದಿ ಬೆನ್ನಾಳಿ ಬ್ರಿಜ್ ಬಳಿ ಶಿವಾಪೂರ ಸ್ವಾಮೀಜಿಗಳ ಕಾರು ಅಪಘಾತ: ಇಬ್ಬರ ದುರ್ಮರಣ.!

ಬೆನ್ನಾಳಿ ಬ್ರಿಜ್ ಬಳಿ ಶಿವಾಪೂರ ಸ್ವಾಮೀಜಿಗಳ ಕಾರು ಅಪಘಾತ: ಇಬ್ಬರ ದುರ್ಮರಣ.!

0

ಬೆಳಗಾವಿ : ಹೊನಗಾ ಬಳಿಯ ಬೆನ್ನಾಳಿ ಬ್ರಿಜ್ ರಾಷ್ಟ್ರೀಯ ಹೆದ್ದಾರಿ ಮೇಲೆ ಕ್ಯಾಂಟರ್, ಕಾರು ಹಾಗೂ ಲಾರಿ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಬೆಳಗಾವಿ ತಾಲೂಕಿನ ಶಿವಾಪೂರ ಗ್ರಾಮದಲ್ಲಿರುವ ಶ್ರೀ ಮುಪ್ಪಿನ ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ೧೧ ಘಂಟೆ ಸುಮಾರಿಗೆ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ ಮೇಲಿಂದ ಬೆಳಗಾವಿ ಕಡೆ ಬರುತಿದ್ದ ಸ್ವಾಮೀಜಿಗಳ ಕಾರು ಮುಂದೆ ಚಲಿಸುತ್ತಿದ್ದ ಕ್ಯಾಂಟರ ಹಠಾತ ನಿಧಾನವಾಗಿದ್ದರಿಂದ ಡಿಕ್ಕಿ ಹೊಡೆದಿದೆ. ಅಷ್ಟರಲ್ಲೆ ಹಿಂದಿನಿಂದ ಬರುತ್ತಿದ್ದ ಲಾರಿ ಕಾರಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಾಗೂ ಶಿವಾಪೂರ ಗ್ರಾಮದಲ್ಲಿರುವ ಶ್ರೀ ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮೃತರ ಬಗ್ಗೆ ಯಾವುದೇ ಖಚಿತ ಮಾಹಿತ ದೊರೆತಿಲ್ಲ. ಅವರು ಮಠದ ಸಹಾಯಕರು, ಭಕ್ತರು ಅಥವಾ ಸ್ವಾಮಿಗಳಿರಬಹುದು ಎಂದು ಊಹಿಸಲಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ತಕ್ಷಣ ಪಿಐ ಸಿನ್ನೂರ, ಕಾಕತಿ ಪಿಎಸ್ಐ ಮಂಜುನಾಥ ಹುಲಕುಂದ, ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ. ಭೀಕರ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಕೆಲ ಕಾಲ ಉಂಟಾಗಿದ್ದ ಸಂಚಾರ ಅಡಚಣೆಯನ್ನು ಕಾಕತಿ ಪೊಲೀಸರು ಸರಿಪಡಿಸಿದ್ದಾರೆ.

Exit mobile version