ಬಳ್ಳಾರಿ: ಒಂದು ಕಡೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವಾಣ್ ಬಳ್ಳಾರಿ ನಗರ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಗಳ ಪರ ಪಶ್ಚಿಮ ದಿಕ್ಕಿನಿಂದ ರೋಡ್ ಶೋ ಮೂಲಕ ಮತಯಾಚನೆ ಮಾಡಿದರೆ ಮತ್ತೊಂದು ಕಡೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಗಡಗಿ ಚೆನ್ನಪ್ಪ ವೃತ್ತದಿಂದ ರೋಡ್ ಶೋ ಆರಂಭಿಸಿದ ಬಸವರಾಜ ಬೊಮ್ಮಾಯಿ ಮೀನಾಕ್ಷಿ ವೃತ್ತ ಬೆಂಗಳೂರು ರಸ್ತೆ, ಜೈನ್ ಬಜಾರ್ ಮೂಲಕ ಎಚ್.ಆರ್. ಗವಿಯಪ್ಪ ವೃತ್ತದವರೆಗೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಬಳ್ಳಾರಿ ನಗರ ಕ್ಷೇತ್ರ ಅಭ್ಯರ್ಥಿ ಸೋಮಶೇಖರ ರೆಡ್ಡಿ ಜೊತೆಗೆ ಇದ್ದರು.