Home ತಾಜಾ ಸುದ್ದಿ ನೂತನ ತರಬೇತಿ ವಾಹನಗಳಿಗೆ ಚಾಲನೆ

ನೂತನ ತರಬೇತಿ ವಾಹನಗಳಿಗೆ ಚಾಲನೆ

0

ಬೆಂಗಳೂರು: ಆಡಳಿತಾತ್ಮಕ ಕೆಲಸಗಳನ್ನು ತುರ್ತಾಗಿ ನಿರ್ವಹಿಸಲು ಅನುಕೂಲ ಮಾಡುವ ಉದ್ದೇಶದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೂತನ 50 ಬೊಲೇರೋ ಜೀಪ್‌ ಹಾಗೂ ತರಬೇತಿ ವಾಹನಗಳಿಗೆ ಚಾಲನೆ ನೀಡಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾರ್ಗ ಸಮೀಕ್ಷೆ ಮಾಡಲು, ಸಂಚಾರ ಬೇಡಿಕೆ ಬಗ್ಗೆ ಅಧ್ಯಯನ ಮಾಡಲು, ಘಟಕದ ವಾಹನಗಳು ಅಪಘಾತವಾದ ಸಂದರ್ಭಗಳಲ್ಲಿ ಅಪಘಾತ ಸ್ಥಳಕ್ಕೆ, ಪೊಲೀಸ್ ಠಾಣೆಗೆ, ಆಸ್ಪತ್ರೆಗೆ ಭೇಟಿ ನೀಡಲು ಹಾಗೂ ಮುಂತಾದ ಆಡಳಿತಾತ್ಮಕ ಕೆಲಸಗಳನ್ನು ತುರ್ತಾಗಿ ನಿರ್ವಹಿಸಲು ಇದರಿಂದ ಅನುಕೂಲವಾಗುತ್ತದೆ. ತರಬೇತಿ ವಾಹನಗಳನ್ನು ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲು ಉಪಯೋಗಿಸಲಾಗುವುದು ಎಂದರು.

Exit mobile version