Home ತಾಜಾ ಸುದ್ದಿ ನಾಳೆ ಜಂಬೂ‌ ಸವಾರಿ: ಗಜಪಡೆಗಳಿಗೆ ಆತ್ಮೀಯ‌ ಸ್ವಾಗತ

ನಾಳೆ ಜಂಬೂ‌ ಸವಾರಿ: ಗಜಪಡೆಗಳಿಗೆ ಆತ್ಮೀಯ‌ ಸ್ವಾಗತ

0

ಶ್ರೀರಂಗಪಟ್ಟಣ: ನಾಳೆ ಅ. 16ರಂದು ನಡೆಯಲಿರುವ ಶ್ರೀರಂಗಪಟ್ಟಣ ಜಂಬೂ ಸವಾರಿ ಹಿನ್ನೆಲೆ, ಇಂದು ಶ್ರೀರಂಗಪಟ್ಟಣಕ್ಕೆ ಆಗಮಿಸಿರುವ ಮೂರು ಆನೆಗಳಿಗೆ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಶಾಸಕ ಎ.ಬಿ. ರಮೇಶ ಬಂಡೀಸಿದ್ದೇಗೌಡ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.
ಮಹೇಂದ್ರ,(ಅಂಬಾರಿ ಆನೆ) ವರಲಕ್ಷ್ಮೀ ಹಾಗೂ ವಿಜಯಾ ಮೂರು ಆನೆಗಳಿಗೆ ಜಿಲ್ಲಾಡಳಿತದಿಂದ ಬೆಲ್ಲ, ಕಬ್ಬು ಮುಂತಾದ ಆಹಾರದ ವ್ಯವಸ್ಥೆ ಮೂಲಕ, ಶ್ರೀರಂಗಪಟ್ಟಣ‌ದ ದಸರಾ ಸಂಭ್ರಮಕ್ಕೆ ಗಜಪಡೆಗಳನ್ನು ಸತ್ಕರಿಸಿ ಭವ್ಯ ಸ್ವಾಗತ ಕೋರಲಾಯಿತು.

Exit mobile version